ಶಿವಮೊಗ್ಗ: ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಾವರ್ಕರ್ ಫ್ಲೇಕ್ಸ್ ಸಂಬಂಧ ಉಂಟಾದ ಗಲಾಟೆಯ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಹೀಗಾಗಿ ದಿನಾಂಕ 20-08-2022ರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಇದೀಗ ಆಗಸ್ಟ್ 23ರ ನಾಳೆ ಕೊನೆಗೊಳ್ಳಲಿದ್ದಂತ ನಿಷೇಧಾಜ್ಞೆಯನ್ನು ಮತ್ತೆ ಆಗಸ್ಟ್ 26ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
BIG BREAKING NEWS: ವೋಟೋರ್ ಐಡಿಗೆ ಆಧಾರ್ ಸಂಖ್ಯೆ ಲಿಂಕ್ ಕಡ್ಡಾಯವಲ್ಲ – ಚುನಾವಣಾ ಆಯೋಗ | Voter ID Aadhaar Link
ಈ ಸಂಬಂಧ ಆದೇಶ ಹೊರಡಿಸಿರುವಂತ ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿ ಡಾ. ನಾಗೇಂದ್ರ ಎಫ್ ಹೊನ್ನಳ್ಳಿಯವರು, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುಪ ಹಿತದೃಷ್ಠಿಯಿಂದ ಶಿವಮೊಗ್ಗ ನಗರದ ಕೋಟೆ, ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆಯನ್ನು ದಿನಾಂಕ 26-08-2022ರ ಬೆಳಿಗ್ಗೆ 6 ಗಂಟೆಯವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ.
ಇನ್ನೂ ನಿಷೇಧಾಜ್ಞೆ ಜಾರಿಗೊಂಡಿರುವಂತ ಪ್ರದೇಶಗಳ ವ್ಯಾಪ್ತಿಯಲ್ಲಿ ಐದು ಜನರಿಗಿಂದ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಯಾವುದೇ ಮೆರವಣಿಗೆ, ಪ್ರತಿಭಟನೆ, ಧರಣಿ, ಸಭೆ-ಸಮಾರಂಭಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ