ಶಿವಮೊಗ್ಗ: ಜಿಲ್ಲೆಯ ಶಿರಾಳಕೊಪ್ಪದಲ್ಲಿ ಶಾಲಾ ಕ್ರೀಡಾಕೂಟದ ಸಂದರ್ಭದಲ್ಲಿ ಉಂಟಾಗದ ಜಗಳ, ತಾರಕ್ಕೇರಿದ ಪರಿಣಾಮ, ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ನಗರದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಕೂಡ ಮಾಡಲಾಗಿದೆ.
BIGG NEWS : ವೀರ ಸಾವರ್ಕರ್ ಕುರಿತು ಮಾತನಾಡುವುದು ಕಾಂಗ್ರೆಸ್ ನಾಯಕರ ದೌರ್ಬಲ್ಯ : ಸಚಿವ ಸುಧಾಕರ್ ವಾಗ್ದಾಳಿ
ಇಂದು ವಲಯ ಮಟ್ಟದ ಶಾಲಾ ಕ್ರೀಡಾಕೂಟವನ್ನು ಶಿರಾಳಕೊಪ್ಪದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಕ್ರೀಡಾಕೂಟ ನಡೆಯುತ್ತಿದ್ದಂತ ವೇಳೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಉಂಟಾಗ ಜಗಳ, ಜಟಾವಟಿಯ ಹಂತವನ್ನು ತಲುಪಿತ್ತು. ಕ್ರೀಡಾಂಗಣದಿಂದ ಹೊರ ಬಂದ ನಂತ್ರ ಗಲಾಟೆ ಮತ್ತಷ್ಟು ಹಚ್ಚಾಗಿತ್ತು.
ಕ್ರೀಡಾಂಗಣದ ಹೊರಗಡೆ ಎರಡು ಕೋಮಿನ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಲ್ಲದೇ ಯುವಕನೊಬ್ಬನ ಮೇಲೆ ಹಲ್ಲೆ ಕೂಡ ನಡೆಸಲಾಗಿದೆ. ಹೀಗಾಗಿ ಶಿರಾಳಕೊಪ್ಪ ಪಟ್ಟಣದಲ್ಲಿ ಈಗ ಬಿಗುವಿನ ವಾತಾವರಣ ಉಂಟಾಗಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿದೆ.
BIG NEWS: ಮಂಡ್ಯದಲ್ಲಿ ಬಿಜೆಪಿ, RSS ಮುಖಂಡರಿಗೆ ‘ಹನಿಟ್ರ್ಯಾಪ್’: ಲಕ್ಷ ಲಕ್ಷ ಪೀಕಿದ ‘ಯುವತಿ ಅರೆಸ್ಟ್’