ವಿಜಯಪುರ: ರಾಜ್ಯದಲ್ಲಿ ಸಿದ್ಧರಾಮಯ್ಯ ಮಾಂಸಹಾರದ ವಿವಾದ ಎದ್ದಿದೆ. ಈ ಬೆನ್ನಲ್ಲೇ ಸಿದ್ಧರಾಮಯ್ಯಗೆ ( Siddaramaiah ) ತಾಕತ್ ಇದ್ದರೇ ಹಂದಿ ಮಾಂಸ ತಿಂದು, ಮಸೀದಿಗೆ ಹೋಗಲಿ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ( MLA Basanagowdha Patil Yathnal ) ಸವಾಲ್ ಹಾಕಿದ್ದಾರೆ.
BIG NEWS: ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ: ಸಚಿವ ಎಸ್.ಟಿ ಸೋಮಶೇಖರ್ ಗೆ ಹೆಚ್ಚಿನ ಭದ್ರತೆ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದೇವಾಲಯಗಳಲ್ಲಿ ಧರ್ಮಪಾಲನ ಸಂಸ್ಕೃತಿ ಇದೆ. ಒಂದೊಂದು ದೇವಾಲಯಗಳಲ್ಲಿ ಒಂದೊಂದು ಪದ್ದತಿ ಇದೆ. ಕೆಲವು ಕಡೆ ಮಾಂಸ ಸೇವಿಸಿ ಹೋಗಬಹುದು, ಮತ್ತೆ ಕೆಲವು ಕಡೆಗಳಲ್ಲಿ ಹಾಗೇ ಹೋಗೋದು ನಿಷಿದ್ಧ ಎಂದರು.
BIGG NEWS : ವೀರ ಸಾವರ್ಕರ್ ಕುರಿತು ಮಾತನಾಡುವುದು ಕಾಂಗ್ರೆಸ್ ನಾಯಕರ ದೌರ್ಬಲ್ಯ : ಸಚಿವ ಸುಧಾಕರ್ ವಾಗ್ದಾಳಿ
ದೇವಾಲಯಕ್ಕೆ ಮಾಂಸತಿಂದು ಹೋಗಿದ್ದೀರಿ ಎಂಬುದಾಗಿ ಸಿದ್ಧರಾಮಯ್ಯ ಅವರನ್ನು ಕೇಳಿದಂತ ಪತ್ರಕರ್ತರಿಗೆ ಅದರಲ್ಲಿ ತಪ್ಪೇನಿದೆ. ತಿನ್ನಬಾರದಾ.? ನನ್ನ ಇಷ್ಟ ಎಂಬುದಾಗಿ ಉದ್ಧಟತನದಿಂದ ಹೇಳಿದ್ದಾರೆ. ಇದು ದೇವರನ್ನು ನಂಬುವಂತ ಆಸ್ತಿಕರ ಮನಸ್ಸಿಗೆ ನೋವಾಗಿದೆ. ಅವರಿಗೆ ತಾಕತ್ತು ಇದ್ದರೇ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ ಎಂದು ಸವಾಲ್ ಹಾಕಿದರು.
BIGG NEWS : ಕಾಂಗ್ರೆಸ್ `ಮಡಿಕೇರಿ ಚಲೋ’ ಪ್ರತಿಯಾಗಿ ಬಿಜೆಪಿಯಿಂದ ಜನಜಾಗೃತಿ ಸಮಾವೇಶ