ಕೇರಳ: ಕೇರಳದ ತ್ರಿಶೂರ್ ಜಿಲ್ಲೆಯ ಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಸ್ಥಾನದಲ್ಲಿ ಭಾನುವಾರ 232 ವಿವಾಹಗಳು ನಡೆದಿವೆ.
ಕೋವಿಡ್ ನಂತರ ಒಂದೇ ದಿನ ದೇವಸ್ಥಾನದಲ್ಲಿ ನಡೆದ ಅತಿ ಹೆಚ್ಚು ಮದುವೆಗಳಲ್ಲಿ ಇದು ಒಂದಾಗಿದೆ. 248 ಬುಕ್ಕಿಂಗ್ ಮಾಡಲಾಗಿತ್ತಾದರೂ ಕೆಲವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.
2017 ಆಗಸ್ಟ್ನಲ್ಲಿ ದೇವಾಲಯದ ಆವರಣದಲ್ಲಿ ಒಂದೇ ದಿನದಲ್ಲಿ 277 ಮದುವೆಗಳು ನಡೆದಿವೆ ಮತ್ತು 2018 ರಲ್ಲಿ ಒಂದೇ ದಿನದಲ್ಲಿ 264 ಮದುವೆಗಳನ್ನು ಮಾಡಲಾಗಿತ್ತು.
ಇದಾದ ಬಳಿಕ, ಜನಜಂಗುಳಿ ನಿಯಂತ್ರಿಸುವ ಸಲುವಾಗಿ, ದೇವಾಲಯದ ಅಧಿಕಾರಿಗಳು ದಿನಕ್ಕೆ 200 ಮದುವೆಗಳಿಗೆ ಮಾತ್ರ ಸೀಮಿತಗೊಳಿಸಿದರು.
ಅಷ್ಟೇ ಅಲ್ಲದೇ, ಮೂರು ಶಾಶ್ವತ ಮಂಟಪಗಳ ಹೊರತಾಗಿ ಇನ್ನೂ ಎರಡು ಹೆಚ್ಚುವರಿ ಮಂಟಪಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಪ್ರತಿ ಮದುವೆಗೆ 20 ಮಂದಿಗೆ ಮಾತ್ರ ಅವಕಾಶವಿದೆ. ಬೆಳಿಗ್ಗೆ 5 ಗಂಟೆಗೆ ಮದುವೆ ಶಾಸ್ತ್ರಗಳು ಪ್ರಾರಂಭವಾಗಿ ರಾತ್ರಿ 11 ರ ಸುಮಾರಿಗೆ ಮುಗಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೋಲ್ ಶುಲ್ಕ ಪಾವತಿಸಲು ಕೇಳಿದ್ಕೆ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ… ವಿಡಿಯೋ
ಆತ್ಮಾಹುತಿ ದಾಳಿಗೆ ಸಂಚು: ಎಲ್ಇಟಿ ಮಾರ್ಗದರ್ಶಕ & ಪಾಕ್ ಸೇನೆಯ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ್ದ ಉಗ್ರ ಅರೆಸ್ಟ್