ಬಳ್ಳಾರಿ : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ(ನಿ)ದಿಂದ ಒಕ್ಕಲಿಗ ಸಮುದಾಯದ ಜನರ ಸಮುದಾಯದ ಜನರ ಆರ್ಥಿಕ ಅಭಿವೃದ್ದಿಗಾಗಿ 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿರುತ್ತಿರುವ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಅವಧಿಯನ್ನು ಆ.30ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಯೋಜನೆಗಳು ಮತ್ತು ಸೌಲಭ್ಯಗಳು:ಸ್ವಯಂ ಉದ್ಯೋಗ ಸಾಲ ಯೋಜನೆ-
ಒಕ್ಕಲಿಗ ಸಮುದಾಯದವರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು
ಘಟಕ ವೆಚ್ಚ ರೂ.50ಸಾವಿರಗಳಿಗೆ ಶೇ.30 ಗರಿಷ್ಠ ರೂ.10ಸಾವಿರಗಳ ಸಹಾಯಧನ ಉಳಿಕೆ ರೂ.40ಸಾವಿರಗಳನ್ನು ವಾರ್ಷಿಕ ಶೇ.4ರಷ್ಟು ಬಡ್ಡಿದರದಲ್ಲಿ ಸಾಲ,
ಘಟಕ ವೆಚ್ಚ ರೂ.50,001ಸಾವಿರಗಳಿಗೆ ಶೇ.30 ಗರಿಷ್ಠ ರೂ.1ಲಕ್ಷವರೆಗೆ ಶೇ.20ರಷ್ಟು ರೂ. 20ಸಾವಿರಗಳ ಸಹಾಯಧನ, ಉಳಿಕೆ ಮೊತ್ತ ರೂ.80ಸಾವಿರಗಳನ್ನು ವಾರ್ಷಿಕ ಶೇ.4ರಷ್ಟು ಬಡ್ಡಿದರದಲ್ಲಿ ಸಾಲ, ಘಟಕ ವೆಚ್ಚ ರೂ.1,00,001ರಿಂದ ಗರಿಷ್ಠ ರೂ.2ಲಕ್ಷವರೆಗೆ ಶೇ.15ರಷ್ಟು ರೂ. 20ಸಾವಿರರಿಂದ ರೂ.30ಸಾವಿರಗಳವರೆಗೆ ಸಹಾಯಧನ ಉಳಿಕೆ ಮೊತ್ತ ರೂ.1.70ಲಕ್ಷಗಳನ್ನು ವಾರ್ಷಿಕ ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತದೆ.
*ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ/ಸರಕು ಸಾಗಾಣಿಕೆ ವಾಹನ ಕೊಳ್ಳಲು ಸಹಾಯಧನ ಯೋಜನೆ: ಟೂರಿಸ್ಟ್ ಟ್ಯಾಕ್ಸಿ ಕೊಳ್ಳಲು ಬ್ಯಾಂಕುಗಳು ಮಂಜೂರು ಮಾಡುವ ಸಾಲದ ಮೊತ್ತದಲ್ಲಿ ಶೇ.50ರಷ್ಟು ಗರಿಷ್ಠ ರೂ.3ಲಕ್ಷದಂತೆ ನಿಗಮದಿಂದ ಸಹಾಯಧನ ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲದ ಮೊತ್ತವಾಗಿರುತ್ತದೆ. ಸಾಲದ ಅಸಲು ಮತ್ತು ಬಡ್ಡಿಯನ್ನು ಬ್ಯಾಂಕ್ ನಿಗದಿಪಡಿಸಿದ ಕಂತುಗಳನ್ವಯ ಬ್ಯಾಂಕ್ಗೆ ಮರುಪಾವತಿಸಬೇಕು.
*ಗಂಗಾ ಕಲ್ಯಾಣ ಯೋಜನೆ: ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ-ವೈಯಕ್ತಿಕ ಕೊಳವೆ ಬಾವಿ ಯೋಜನೆ: ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಘಟಕ ವೆಚ್ಚ ರೂ.2ಲಕ್ಷಗಳು ಅದರಲ್ಲಿ ರೂ.1.50 ಲಕ್ಷಗಳ ಸಹಾಯಧನ ಹಾಗೂ ರೂ.50ಸಾವಿರಗಳ ಸಾಲ ಶೇ.4ರಷ್ಟು ಬಡ್ಡಿದರದಲ್ಲಿ, ಪ್ರತಿ ಕೊಳವೆ ಬಾವಿಗೆ ವಿದ್ಯುದ್ದೀಕರಣ ವೆಚ್ಚ ರೂ.50ಸಾವಿರಗಳಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಭರಿಸಲಾಗುವುದು.
*ಸಾಮೂಹಿಕ ನೀರಾವರಿ ಯೋಜನೆ: ಒಕ್ಕಲಿಗ ಸಮುದಾಯಕ್ಕೆ ಸೇರಿದ ಕನಿಷ್ಠ 03 ಜನ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಂದಿರುವ 8-15 ಎಕರೆ ಜಮೀನಿಗೆ ರೂ.4ಲಕ್ಷಗಳ ವೆಚ್ಚದಲ್ಲಿ 02 ಕೊಳವೆ ಬಾವಿ ಮತ್ತು 15 ಎಕರೆಗಿಂತ ಹೆಚ್ಚಿನ ಜಮೀನಿಗೆ ರೂ.6ಲಕ್ಷಗಳ ವೆಚ್ಚದಲ್ಲಿ 03 ಕೊಳವೆ ಬಾವಿಗಳ ಮೂಲಕ ನೀರಾವರಿ ಸೌಲಭ್ಯ ಪ್ರತಿ ಕೊಳವೆ ಬಾವಿಗೆ ವಿದ್ಯುದ್ದೀಕರಣಕ್ಕೆ ರೂ.50ಗಳಂತೆ ಘಟಕ ವೆಚ್ಚದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಭರಿಸಲಾಗುವುದು.
ಭೂಮಟ್ಟದಲ್ಲಿ ದೊರೆಯುವ ನದಿ ಮತ್ತು ಜಲಾಶಯಗಳ ನೀರಾವರಿ ಸಂಪನ್ಮೂಲಗಳಿಂದ ಸಾಮೂಹಿಕ ಯೋಜನಾ ಘಟಕ ವೆಚ್ಚದಲ್ಲಿ ಮಿತಿಯಲ್ಲಿ ಪೈಪ್ ಲೈನ್ ಮೂಲಕ ಏತ ನೀರಾವರಿ ಸೌಲಭ್ಯ ಒದಗಿಸಲಾಗುವುದು.
*ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ-ಒಕ್ಕಲಿಗ ಸಮುದಾಯದ ಯುವಜನತೆಯನ್ನು ಕೌಶಲ್ಯ ಅಭಿವೃದ್ದಿಪಡಿಸಿ ಉದ್ಯೋಗಮುಖಿಯನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ITI, GTTC, KGTTI, ರಲ್ಲಿ ಅಲ್ಪಾವಧಿ ಕೋರ್ಸಗಳ ಮೂಲಕ ಕೌಶಲ್ಯ ತರಬೇತಿ ನೀಡಲು ಆನ್ಲೈನ್ ನಲ್ಲಿ ಕೌಶಲ್ಯ ಕರ್ನಾಟಕ ತಂತ್ರಾಂಶ https://www.kaushalkar.com ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಪೂರಕ ಮಾಹಿತಿ ಹಾಗೂ ಉಚಿತ ಅರ್ಜಿ ಸಲ್ಲಿಕೆ ಸೌಲಭ್ಯ ನಿಗಮದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು. ಮೇಲ್ಕಂಡ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಒಕ್ಕಲಿಗ ಸಮುದಾಯದ ಫಲಾಪೇಕ್ಷಿಗಳು ಯೋಜನೆಗಳ ಷರತ್ತು ಮತ್ತು ನಿಬಂಧನೆಗಳನ್ನು ಹಾಗೂ ಹೆಚ್ಚಿನ ಮಾಹಿತಿಯನ್ನು ನಿಗಮದ ವೆಬ್ ಸೈಟ್ https://kvcdc.karnataka.gov.in ಗೆ ವೀಕ್ಷಿಸಬಹುದು ಎಂದು ಅವರು ತಿಳಿಸಿದ್ದಾರೆ