ಚಿಕ್ಕಬಳ್ಳಾಪುರ: ನಾನು ಏನು ತಿನ್ನಬೇಕು ಏನು ತಿನ್ನಬಾರದು ಎಂದು ಕೇಳಲು ಅವರು ಯಾರು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾಡಿ, ನಾನು ಏನು ಬೇಕಾದರೂ ತಿಂದು ಎಲ್ಲಿಗೆ ಬೇಕಾದರೂ ಹೋಗುತ್ತೇನೆ ಅಂತ ಮಡಿಕೇರಿಯಲ್ಲಿ ಮಾಂಸ ತಿಂದು ಹೋದ ವಿವಾದದ ಬಗ್ಗೆ ಅವರು ಕಿಡಿಕಾರಿದರು. ಇನ್ನೂ ನಾನು ಸುದರ್ಶನ ಅತಿಥಿ ಗೃಹದಲ್ಲಿ. ಊಟ ಮಾಡಿದ್ದು, ನಿಜ ಸಂಜೆ ದೇವಾಲಯಕ್ಕೆ ಹೋಗಿದ್ದೆ ಅಂತ ಹೇಳಿದ್ದಾರೆ.
ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆ ಮಾಂಸದೂಟ ಮತ್ತು ದೇವಸ್ಥಾನದ ವಿವಾದ ಸುತ್ತುಕೊಂಡಿದ್ದು, ಈ ನಡುವೆ ಹಲವು ಮಂದಿ ಅವರ ವಿರುದ್ದ ಕಿಡಿಕಾರುತ್ತಿದ್ದಾರೆ.
ಅಂದ ಹಾಗೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಈಗ ಮತ್ತೆ ಮಾಂಸದೂಟ ಮಾಡಿ ದೇವಸ್ಥಾನಕ್ಕೆ ತೆರಳಿದ್ದರು ಎನ್ನುವ ವಿವಾದ ನಿರ್ಮಾಣ ಮಾಡಿದ್ದು, ಈಗ ಅದಕ್ಕೆ ಅಂತಿಮ ತೆರೆಯನ್ನು ಮಡಿಕೇರಿ ಪ್ರವಾಸದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಆರೋಪಕ್ಕೆ ಮಾಜಿ ಎಂಎಲ್ ಸಿ ವೀಣಾ ಅಚ್ಚಯ್ಯ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಡಿಕೇರಿ ಪ್ರವಾಸದ ವೇಳೆ ಮಾಂಸಹಾರ ಸೇವನೆ ಮಾಡಿಲ್ಲ. ನನಗೆ ನಾನ್ ವೆಜ್ ಬೇಡ ಎಂದು ವೆಜ್ ತಿಂದಿದ್ದಾರೆ. ಟೆಬೇಲ್ ಮೇಲೆ ಸಸ್ಯಹಾರ ಮತ್ತು ಮಾಂಸಹಾರ ಎರಡೂ ಇತ್ತು. ಆದರೆ ಸಿದ್ದರಾಮಯ್ಯ ಅವರು ನನಗೆ ಅಕ್ಕಿ ರೊಟ್ಟಿ ಬೇಕು ಅಂತಾ ಸಸ್ಯಹಾರ ಸೇವನೆ ಮಾಡಿದ್ರು. ನಾನೇ ಅವರಿಗೆ ಸಸ್ಯಹಾರ ಊಟವನ್ನು ಬಡಿಸಿದ್ದೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮಡಿಕೇರಿ ಪ್ರವಾಸದ ವೇಳೆ ಮಡಿಕೇರಿ ಅತಿಥಿ ಗೃಹದಲ್ಲಿ ನಾಟಿ ಕೋಳಿ ಸಾರು ತಿಂದು ಬಳಿಕ ಕೊಡ್ಲಿಪೇಟೆ ಬಸವೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದ್ದು, ಮಡಿಕೇರಿಯ ಅತಿಥಿ ಗೃಹದಲ್ಲಿ ಸಿದ್ದರಾಮಯ್ಯ ನಾಟಿ ಕೋಳಿ ಸಾರು ಸೇವಿಸಿರುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.