ದಿನಬೆಳಗಾದ್ರೆ ಸಾಕು ಒಂದಿಷ್ಟು ಸಿನೆಮಾಗಳು ಪ್ರಾರಂಭವಾಗುತ್ತವೆ. ಈ ಸಿನೆಮಾಗಳಲ್ಲಿ ಕೆಲವು ಮಾತ್ರ ಸಿನೆಮಾ ಅನೌನ್ಸ್ ಆದಾಗಿನಿಂದ ಹಿಡಿದು ರಿಲೀಸ್ ಆಗುವ ವರೆಗೂ ತಮ್ಮಲ್ಲಿನ ಯಾವುದೋ ಒಂದು ಕಂಟೆಂಟಿನಿಂದ ಪ್ರೇಕ್ಷರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸು ಸಾಧಿಸುತ್ತವೆ. ಅಂಥಹ ಸಿನಿ ಪಟ್ಟಿಗೆ ಆರಂಭದಿಂದಲೂ ಸೇರಿದ ಸಿನೆಮಾವೇ ಧಮಾಕ.
ಹೌದು, ಹೆಸರಿನಂತೆಯೇ ಸ್ಯಾಂಡಲ್ ವುಡ್ ನಲ್ಲೊಂದು ಹೊಸ ಧಮಾಕ ಸೃಷ್ಟಿಸಿರುವ ಮನರಂಜನೆಯ ಹೊತ್ತು ಪ್ರೇಕ್ಷಕರೆದುರು ಬರಲು ಸಜ್ಜಾಗಿರುವ ಈ ಚಿತ್ರದ ಮಸ್ತ್ ಮಜಾ ಕೊಡೋ ಟ್ರೈಲರ್ ರಿಲೀಸ್ ಆಗಿದೆ. ವಾರವಿಡೀ ದುಡಿದು ದಣಿದ ಸಿನಿಪ್ರಿಯರಿಗೆ ಈ ಧಮಾಕ ಟ್ರೈಲರ್ ನೋಡಿದ ಮೇಲೆ ನಗುವಿನ ಟಾನಿಕ್ ಪಕ್ಕಾ ಸಿನೆಮಾದಲ್ಲಿ ಸಿಗಲಿದೆ ಎಂಬ ಭರವಸೆ ಸಿಕ್ಕಂತಾಗಿದೆ.
ಇಬ್ಬರು ಅದ್ಭುತ ಕಲಾವಿದರ ಸಮಾಗಮದ ಧಮಾಕ ಟ್ರೇಲರ್ ನಲ್ಲೇ ಇಷ್ಟು ಕಾಮಿಡಿ ಸನ್ನಿವೇಶ ಗಳಿದ್ದಾಗ ಸಿನೆಮಾ ಮೇಲಿನ ಭರವಸೆ ಡಬಲ್ ಆಗಿರೋದ್ರಲ್ಲಿ ನೋ ಡೌಟ್.ಲಕ್ಷ್ಮೀ ರಮೇಶ್ ನಿರ್ದೇಶನದ ಧಮಾಕ ಚಿತ್ರದ ಟ್ರೈಲರ್ ಖ್ಯಾತ ಹಾಸ್ಯನಟ ಚಿಕ್ಕಣ್ಣನ ಹಿನ್ನೆಲೆ ಧನ್ವಿಯಿಂದ ಟ್ರೇಲರ್ ಆರಂಭವಾಗಿದ್ದು, ಶಿವರಾಜ್ ಕೆ ಆರ್ ಪೇಟೆ ತಮ್ಮದೇ ಆದ ಮ್ಯಾನರಿಸಂ ಮೂಲಕ ಅಭಿನಯಿಸಿರೋದು, ಇವರಿಗೆ ಜೋಡಿಯಾಗಿ ನಯನಾ ನಟಿಸಿದ್ದು ಈ ಜೋಡಿಗಳ ಮೋಡಿ ಖಂಡಿತ ಕಾಮಿಡಿಯ ನಗು ತರಿಸುತ್ತವೆ. ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಪ್ರಕಾಶ್ ತುಮಿನಾಡು, ಮಹಾಂತೇಶ್ ಹಿರೇಮಠ, ಅರುಣಾ ಬಾಲರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ರಿಲೀಸ್ ಆಗಿರುವ ಟ್ರೈಲರ್ ಭಾರೀ ಮೆಚ್ಚುಗೆ ಪಡಿತಾ ಇದ್ದು, ಕಾಮಿಡಿ ಜೊತೆಗೆ ಒಂದು ಗಟ್ಟಿಸಂದೇಶವಿರುವ ಧಮಾಕ ಚಿತ್ರವೇ ಲಕ್ಷ್ಮಿ ರಮೇಶ್ ಅವರ ಚೊಚ್ಚಲ ಚಿತ್ರವಾದ್ರೂ ಹೆಸರಾಂತ ನಿರ್ದೇಶಕರೊಂದಿಗೆ ಪಳಗಿರುವ ಇವರ ಡೈರೆಕ್ಟರ್ ಕ್ಯಾಪ್ ಗಟ್ಟಿಯಾಗಿ ನಿಲ್ಲುವ ಭರವಸೆ ಹುಟ್ಟುಹಾಕಿದ್ದಾರೆ ಎಂದರೆ ತಪ್ಪಲ್ಲ. ಚಿತ್ರವನ್ನ ಎಸ್ ಆರ್ ಮೀಡಿಯಾ ಪ್ರೊಡಕ್ಷನ್ ಬ್ಯಾನರ್ ನಡಿ ಸುನೀಲ್ ಎಸ್ ರಾಜ್ ಮತ್ತು ಅನ್ನಪೂರ್ಣ ಪಾಟೀಲ ನಿರ್ಮಾಣ ಮಾಡಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ, ಹಾಲೇಶ್ ಎಸ್ ಛಾಯಾಗ್ರಹಣ, ರಘು ಆರ್ ಜೆ ನೃತ್ಯ ನಿರ್ದೇಶನ, ವಿನಯ್ ಕೂರ್ಗ್ ಸಂಕಲನ ಸಿನಿಮಾಕ್ಕಿದೆ. ಈ ಮೊದಲು ಟೀಸರ್ ಹಾಗು ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಧಮಾಕ ಬಳಗ ಈಗ ಟ್ರೇಲರ್ ಮೂಲಕ ಮತ್ತೊಮ್ಮೆ ನಿರೀಕ್ಷೆಯನ್ನು ದುಪ್ಪಾಟ್ಟಾಗಿಸಿದ್ದು ನಗುವಿನ ಟಾನಿಕ್ ಕೊಡಲು ಸದ್ಯದಲ್ಲೇ ಪ್ರೇಕ್ಷಕರೆದುರು ಬರುವ ತಯಾರಿಯಲ್ಲಿದೆ.