ಚಿಕ್ಕಮಗಳೂರು: ರಾಜ್ಯ ಸರ್ಕಾರದಿಂದ ಭಾರೀ ಮಳೆಯಿಂದಾಗಿ ( Heavy Rain ) ಉಂಟಾದಂತ ಅತಿವೃಷ್ಠಿಯಿಂದಾಗಿ ಹಾನಿಗೊಂಡ ಬೆಳೆಗೆ ಪರಿಹಾರ ನೀಡೋದಕ್ಕೆ ಅರ್ಜಿಯನ್ನು ಕರೆಯಲಾಗಿದೆ. ಆದ್ರೇ.. ಸರ್ಕಾರ ರೈತರಿಗೆ ನೀಡಿರುವಂತ ಅರ್ಜಿಯನ್ನು ಇಂಗ್ಲೀಷ್ ನಲ್ಲಿ ( English ) ನೀಡಿದ್ದಕ್ಕೆ, ರೈತರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಸ್ವಾಮಿ ನಾವು ರೈತರು, ನಮ್ಗೆ ಇಂಗ್ಲೀಷ್ ಬರೋದಿಲ್ಲ. ಕನ್ನಡದ ಅರ್ಜಿ ( Kannada Application ) ಕೊಡಿ ಎಂಬುದಾಗಿ ರೈತರು ಒತ್ತಾಯಿಸಿದ್ದಾರೆ.
ಕಳೆದ ತಿಂಗಳು ಸುರಿದ ಮಳೆಯಿಂದಾಗಿ ರೈತರು ( Farmer ) ಬೆಳೆ ನಷ್ಟ ಅನುಭವಿಸಿದ್ದಾರೆ. ಸರ್ಕಾರ ಬೆಳೆ ಪರಿಹಾರಕ್ಕೆ ( Crop Compensation ) ಅರ್ಜಿ ಆಹ್ವಾನಿಸಿದ್ದು ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ಆಂಗ್ಲ ಭಾಷೆಯ ಅರ್ಜಿಯನ್ನು ನೀಡಿದ್ದಾರೆ. ಪರಿಹಾರ ಸಿಕ್ಕರೆ ಸಾಕು ಅನ್ನೋ ರೈತರು ಅದೇ ಅರ್ಜಿ ಪಡೆದು ಭರ್ತಿ ಮಾಡಿಸಲು ವಿದ್ಯಾವಂತರ ಮನೆ ಬಾಗಿಲಿಗೆ ಅಲೆದಾಡಿದ್ದಾರೆ.
ಕೆಲವರು ಇದರ ಲಾಭ ಪಡೆದು ಅರ್ಜಿ ಭರ್ತಿ ಮಾಡಲು 50 ರೂಗಳಿಂದ 500ರೂ ವರೆಗೂ ರೈತರಿಂದ ಹಣ ಪಡೆದಿದ್ದಾರೆ. ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಗ್ಲಿಷ್ ಅರ್ಜಿಯಿಂದ ಬೇಸತ್ತ ಕೆಲವು ರೈತರು ಗೊಂದಲದಿಂದಾಗಿ ಇನ್ನೂ ಅರ್ಜಿ ಸಲ್ಲಿಸದೆ ಪರದಾಡುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಬೆಳೆ ಪರಿಹಾರ ಕೇಂದ್ರ ಸರ್ಕಾರದ ಯೋಜನೆ. ಅದಕ್ಕಾಗಿ ಇಂಗ್ಲಿಷ್ ಅರ್ಜಿ ಕಳಿಸಿದ್ದಾರೆ ಎಂಬ ಕಾರಣ ಹೇಳಿ ನುಣುಚಿಕೊಂಡಿದ್ದಾರೆ. ಹಾಗಾದ್ರೇ.. ಕರ್ನಾಟಕದಲ್ಲಿ ಬೆಳೆಪರಿಹಾರ ವಿತರಣೆಗಾಗಿ ನೀಡಿರುವಂತ ಅರ್ಜಿಯನ್ನು ಇಂಗ್ಲೀಷ್ ನಲ್ಲಿ ನೀಡಿದ್ದೇಕೆ ಎಂಬುದು ಅನೇಕರ ಪ್ರಶ್ನೆಯಾಗಿದೆ.
BREAKING NEWS : ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ʻ ಮೊಟ್ಟೆ ಎಸೆತ ಸಂಪತ್ ಬಂಧನ ʼ | Sampath Arrested
ರಾಜ್ಯ ಸರ್ಕಾರ ಈ ಬಗ್ಗೆ ಗಮನಿಸಬೇಕು. ಕೃಷಿ ಸಚಿವ ಬಿ.ಸಿ ಪಾಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂಗ್ಲೀಷ್ ಅರ್ಜಿಗಳನ್ನು ಬದಲಿಸಿ, ಕನ್ನಡದ ಅರ್ಜಿಗಳನ್ನು ಸಂಬಂಧಿಸಿದಂತ ಇಲಾಖೆಯಿಂದ ರೈತರಿಗೆ ಕೊಡಿಸಬೇಕು ಎಂಬುದಾಗಿ ರಾಜ್ಯದ ರೈತರು ಒತ್ತಾಯಿಸಿದ್ದಾರೆ. ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ದಿನೇಶ್ ಪಟವರ್ಧನ್, ಚಿಕ್ಕಮಗಳೂರು
BIGG NEWS: ಇಯರ್ ಫೋನ್ ಹಾಕಿಕೊಂಡು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ಮೂವರು ಸಾವು