ಧಾರವಾಡ: ಪೊಲೀಸರೆಂದ್ರೇ.. ಕಾನೂನು ಪಾಲನೆ, ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ಕೊಡಿಸೋ ಕೆಲಸವನ್ನು ಮಾಡಬೇಕು. ಆದ್ರೇ.. ಪೊಲೀಸರೇ ( Karnataka Police ) ಕಾನೂನು ನಿಯಮ ಮೀರಿ, ಬಂಧಿತ ಭೂಗತ ಪಾತಕಿಯೊಬ್ಬನನ್ನು ಲಾಡ್ಜ್ ಗೆ ಕರೆದೊಯ್ದು ಆತನ ಪ್ರೇಯಸಿಯೊಂದಿಗೆ ಸರಸ ಸಲ್ಲಾಪಕ್ಕೆ ಪೊಲೀಸರೇ ಬಿಟ್ಟಿರು ಘಟನೆ ಧಾರವಾಡದಲ್ಲಿ ನಡೆದಿದೆ. ಈ ಮೂಲಕ ರಾಜ್ಯದ ಪೊಲೀಸರೇ ತಲೆ ತಗ್ಗಿಸುವಂತೆ ಆಗಿದೆ.
ಮೊಟ್ಟೆ ವಿವಾದ: ‘ಕೈ ಕಾರ್ಯಕರ್ತ’ನೆಂದ ‘ಸಂಪತ್’ನ ‘RSS ಧಿರಿಸಿ ಪೋಟೋ’ ಸಹಿತ ಸತ್ಯ ಬಿಚ್ಚಿಟ್ಟ ‘ಕಾಂಗ್ರೆಸ್’.!
ಇಂದು ಭೂಗತ ಪಾತಕಿಯಾಗಿದ್ದಂತ ಬಚ್ಚಾ ಖಾನ್ ಕೋರ್ಟ್ ಗೆ ಹಾಜರು ಪಡಿಸೋದಕ್ಕೆ ಬಳ್ಳಾರಿ ಪೊಲೀಸರು ಕರೆದೊಯ್ದಿದ್ದರು. ಹೀಗೆ ಕರೆದೊಯ್ದಿದ್ದಂತ ಪೊಲೀಸರು ಭೂಗತ ಪಾತಕಿಯನ್ನು ಲಾಡ್ಜ್ ಗೂ ಕರೆದೊಯ್ದು, ಆತನ ಪ್ರೇಯಸಿಯೊಂದಿಗೆ ಸರಸ-ಸಲ್ಲಾಪಕ್ಕೆ ಅವಕಾಶ ನೀಡಿದ್ದಾರೆ.
ಈ ವಿಷಯ ತಿಳಿದಂತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಅವರು, ತಮ್ಮ ನೇತೃತ್ವದಲ್ಲಿಯೇ ಧಾರವಾಡದಲ್ಲಿ ಲಾಡ್ಜ್ ನಲ್ಲಿ ಭೂಗತ ಪಾತಕಿಯನ್ನು ಪೊಲೀಸರೇ ಪ್ರೇಯಸಿ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಂತ ವೇಳೆ ರೈಡ್ ಮಾಡಿದ್ದಾರೆ. ಬಳಿಕ, ಭೂಗತ ಪಾತಕಿ ಬಚ್ಚಾಖಾನ್ ಎಂಬಾತನನ್ನು ಬಂಧಿಸಿ, ವಿದ್ಯಾಗಿರಿ ಠಾಣೆಗೆ ಕರೆದೊಯ್ದಿದ್ದಾರೆ.
BREAKING NEWS : ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ʻ ಮೊಟ್ಟೆ ಎಸೆತ ಸಂಪತ್ ಬಂಧನ ʼ | Sampath Arrested
ಅಂದಹಾಗೇ, ಭೂಗತ ಪಾತಕಿ ಬಚ್ಚಾಖಾನ್ ಎಂಬಾತನನ್ನು ಧಾರವಾಡ ಕೋರ್ಟ್ ಗೆ ಕರೆದೊಯ್ಯೋ ಸಂದರ್ಭದಲ್ಲಿಯೇ ಮಾರ್ಗ ಮಧ್ಯೆ ಲಾಡ್ಜ್ ನಲ್ಲಿ ಪ್ರೇಯಸಿಯ ಜೊತೆಗೆ ಸರಸ ಸಲ್ಲಾಪಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಹೀಗೆ ನಡೆಯುತ್ತಿದ್ದಂತ ವಿಷಯ ತಿಳಿದು, ಖುದ್ದು ಹುಬ್ಬಳ್ಳಿ-ಧಾರವಾಡ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿ, ಪೊಲೀಸರನ್ನು, ಭೂಗತ ಪಾತಕಿಯನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.
BIGG NEWS: ಇಯರ್ ಫೋನ್ ಹಾಕಿಕೊಂಡು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ಮೂವರು ಸಾವು