ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ವಿವಾದ ತಾರಕಕ್ಕೇರಿತ್ತು. ಎರಡು ಗುಂಪುಗಳಾಗಿ ಶಿಕ್ಷಣ ಸಂಸ್ಥೆಯ ಆಡಳಿತ ನಡೆಸೋ ಸಂಬಂಧ ಜಟಾಪಟಿ ಕೂಡ ನಡೆದಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶಿಸಿದೆ.
BIG NEWS: ‘ಯೂಟ್ಯೂಬ್ ಚಾನಲ್’ಗಳನ್ನು ಮಾಧ್ಯಮಗಳೆಂದು ಪರಿಗಣಿಸಲಾಗದು- ಬೆಳಗಾವಿ ಡಿಸಿ
ಈ ಸಂಬಂಧ ಶಿವಮೊಗ್ಗದ ಸಂಘಗಳ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಆದೇಶ ಹೊರಡಿಸಿದ್ದು, ದಿನಾಂಕ 17-03-2022ರಂದು ನಡೆದ 56ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಕ್ರಮಬದ್ಧವಾಗಿ ಜರುಗಿದ ಕುರಿತು ಹಾಗೂ ಸದರಿ ಸಭೆಯಲ್ಲಿ ರಚನೆಯಾಗಿದೆ ಎಂದು ಹೇಳಲಾದ ಎರಡು ಆಡಳಿತ ಮಂಡಳಿಗಳ ಪೈಕಿ ಯಾವ ಆಡಳಿತ ಮಂಡಳಿ ನೈಜವಾದದ್ದು ಎಂಬ ಬಗ್ಗೆ ಸಮರ್ಥನೀಯವಾದ ದಾಖಲಾತಿಗಳು ಇಲ್ಲ. ಹೀಗಾಗಿ ಆ ಎರಡು ಆಡಳಿತ ಮಂಡಳಿಯನ್ನು ರದ್ದುಗೊಳಿಸಿದೆ ಎಂದು ತಿಳಿಸಿದ್ದಾರೆ.
BIG NEWS: ಲಿಂಗಾಯತ ಧರ್ಮದ ವಿಚಾರದಲ್ಲಿ ಸಿದ್ಧರಾಮಯ್ಯಗೆ ಪಶ್ಚಾತಾಪವಾಗಿದೆ – ಬಾಳೆಹೊನ್ನೂರು ಶ್ರೀ
ಈ ಹಿನ್ನಲೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಅವರನ್ನು, ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960ರ ಕಲಂ 27(1)(ಸಿ) ರ ಪ್ರಕಾರ, ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಿದೆ. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥೆಗೆ ಹೊಸದಾಗಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಚುನಾವಣೆಯನ್ನು ನಡೆಸಬಹುದಾಗಿ ಎಂಬುದಾಗಿ ಹೇಳಿದ್ದಾರೆ.
ವರದಿ : ಉಮೇಶ್ ಮೊಗವೀರ, ಸಾಗರ