ಬೆಂಗಳೂರು: ಕೊಡಗಿನ ಪ್ರವಾಸದ ವೇಳೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದ ಬೆನ್ನಲ್ಲೇ, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಅವರ ಶಿವಮೊಗ್ಗ ಪ್ರವಾಸವನ್ನು ರದ್ದು ಪಡಿಸಲಾಗಿದೆ.
OMG : ಈ ದೇಶದಲ್ಲಿ 10 ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯರಿಗೆ ಲಕ್ಷ ಲಕ್ಷ ನಗದು ಹಣ : ಎಲ್ಲಿ ಗೊತ್ತಾ?
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಅವರು, ದಿನಾಂಕ 24-0-8-2022ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಪ್ರವಾಸ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ದ್ವಿತೀಯ ಹಂತದ ಪ್ರವಾಸ ಕಾರ್ಯಕ್ರಮದ ದಿನಾಂಕವನ್ನು ನಂತ್ರ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಂದಹಾಗೇ, ಕಲಬುರಗಿಯಲ್ಲಿ ಇಂದಿನಿಂದ ಮೊದಲ ಹಂತದ ರಾಜ್ಯ ಪ್ರವಾಸ ಆರಂಭಗೊಂಡಿತ್ತು. ಎರಡನೇ ಹಂತದಲ್ಲಿ ಆ.24ರಿಂದ ಶಿವಮೊಗ್ಗದಲ್ಲಿ ಆರಂಭಗೊಳ್ಳಬೇಕಿತ್ತು. ಆದ್ರೇ.. ಶಿವಮೊಗ್ಗದಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸದೆ ಇರುವುದು, ಜೊತೆಗೆ ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಿದ್ದು ಕಾರಿನ ಮೇಲೆ ಮೊಟ್ಟೆ ದಾಳಿ ನಡೆದಿರುವುದರ ಹಿನ್ನಲೆಯಲ್ಲಿ, ಸದ್ಯಕ್ಕೆ ಶಿವಮೊಗ್ಗ ಜಿಲ್ಲಾ ಪ್ರವಾಸವನ್ನು ಎಂ.ಬಿ ಪಾಟೀಲ್ ರದ್ದುಗೊಳಿಸಿದ್ದಾರೆ.