ಕಾರವಾರ: ರಾಜ್ಯ ಸರ್ಕಾರದಿಂದ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವಂತ ವಿದ್ಯಾರ್ಥಿಗಳಿಗೆ, ಇನ್ಮುಂದೆ ಸಿರಿಧಾನ್ಯಗಳಿಂದ ಮಾಡಿ ಆಹಾರ ನೀಡಲಿದೆ. ಈ ಮೂಲಕ ಇನ್ಮುಂದೆ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಿರಿಧಾನ್ಯಗಳಿಂದ ಮಾಡಿದ ಆಹಾರದ ಸವಿ ಕೂಡ ದೊರೆಯಲಿದೆ.
ಗುಪ್ತಚರ ಇಲಾಖೆ ICUನಲ್ಲಿದೆ, ಸರ್ಕಾರ ಸತ್ತಿದೆ: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ
ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಾಯೋಗಿಕವಾಗಿ ಸೆಪ್ಟೆಂಬರ್ 1ರಿಂದ ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತಿದೆ. ಇಲ್ಲಿನ ಯಶಸ್ಸಿನ ಬಳಿಕ, ಇತರೆ ಜಿಲ್ಲೆಗಳಿಗೂ ವಿಸ್ತರಿಸೋ ಚಿಂತನೆಯನ್ನು ಇಲಾಖೆ ನಡೆಸಿದೆ.
ಅಂದಹಾಗೇ, ಸಿರಿಧಾನ್ಯಗಳಿಂದ ಮಾಡಿದಂತ ಊಟದ ಸವಿಯನ್ನು ಉತ್ತರ ಕನ್ನಡ ಜಿಲ್ಲೆಯ ಸುಮಾರು 8,500 ವಿದ್ಯಾರ್ಥಿಗಳು, ಹಾವೇರಿ ಜಿಲ್ಲೆಯ 13,500 ವಿದ್ಯಾರ್ಥಿಗಳು ಸವಿಯಲಿದ್ದಾರೆ. ಆರು ತಿಂಗಳ ಬಳಿಕ, ಮಕ್ಕಳ ಆರೋಗ್ಯದಲ್ಲಿ ಆಗುವಂತ ಸುಧಾರಣೆ ಗಮನಿಸಿ, ಇಲಾಖೆ ಇತರೆ ಜಿಲ್ಲೆಗಳಿಗೂ ಯೋಜನೆ ವಿಸ್ತರಿಸಲಿದೆ ಎನ್ನಲಾಗಿದೆ.
BIGG NEWS : ʻ ಗಾಂಧಿಯನ್ನು ಕೊಂದವರು ನನ್ನನ್ನು ಬಿಡ್ತಾರಾ ʼ : ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಆಕ್ರೋಶ
ಇನ್ನೂ ಪ್ರತಿ ವಿದ್ಯಾರ್ಥಿಗಳಿಗೆ ಒಂದು ಕೆಜಿ ಯಂತೆ ತಿಂಗಳಿಗೆ ನಾಲ್ಕು ದಿನ ಸಿರಿಧಾನ್ಯಗಳಿಂದ ತಯಾರಿಸಿದಂತ ಆಹಾರಗಳನ್ನು ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಯ ವಸತಿ ಶಾಲೆಗಳ ವಿದ್ಯಾರ್ಥಿಗಳಿ ನೀಡಲಾಗುತ್ತಿದೆ. ಇದಕ್ಕಾಗಿ 1.40 ಕೋಟಿ ವೆಚ್ಚವಾಗುತ್ತಿದೆ ಎಂದು ಅಂದಾಜಿಸಲಾಗಿದೆ.