ಬೆಂಗಳೂರು : ʻ ನಾವೇನಾದರೂ ಮೊಟ್ಟೆ ಕೈಗೆ ತೆಗೆದುಕೊಂಡರೆ ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲʼ ಎಂದು ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದ್ದಾರೆ
BIG NEWS: ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ SPಯನ್ನು ಕೂಡಲೇ ಅಮಾನತುಗೊಳಿಸಿ – ಕಾಂಗ್ರೆಸ್ ಒತ್ತಾಯ
ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮಗೆ ಶಕ್ತಿ ಇಲ್ಲ ಎಂದು ಇಲ್ಲಿ ಸೇರಿಲ್ಲ, ನಾವು ಗಾಂಧಿ ತತ್ವಕ್ಕೆ ಸೇರಿದವರು. ನಾವು ಅದಕ್ಕೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಸಾವರ್ಕರ್ ವಿಚಾರವಾಗಿ ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪು ಇದ್ದರೆ ಚರ್ಚೆ ಮಾಡೋಣ. ಒಂದು ವೇಳೆ ತಪ್ಪಾದರೆ ನಾವು ಕ್ಷಮೆ ಕೇಳುತ್ತೇವೆ, ಇಲ್ಲಾಂದ್ರೆ ನೀವು ಕ್ಷಮೆ ಕೇಳಬೇಕು. ಸಾವರ್ಕರ್ ಹೆಸರು ಇತಿಹಾಸದ ಪುಟಗಳಿಂದ ಶಾಶ್ವತವಾಗಿ ಕೈ ಬಿಡಬೇಕಾಗುತ್ತೆ. ಸಾವರ್ಕರ್ ಬ್ರಿಟಿಷರಿಗೆ ಕ್ಷಮೆ ಕೇಳಿದವರು.
BIG NEWS: ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ SPಯನ್ನು ಕೂಡಲೇ ಅಮಾನತುಗೊಳಿಸಿ – ಕಾಂಗ್ರೆಸ್ ಒತ್ತಾಯ
ಅವರು ನಿಮಗೆ ಹೀರೋ. ಬ್ರಿಟಿಷರ ಕಾಲಿಗೆ ಬಿದ್ದು ನೀವು ಹೇಳಿದ ಹಾಗೆ ಜೀವನ ನಡೆಸುತ್ತೇನೆ ಎಂದಿದ್ದರು ಸಾವರ್ಕರ್. ಈ ವಿಚಾರವಾಗಿ ಸಿದ್ದರಾಮಯ್ಯ ಅವರು ಇತಿಹಾಸದಲ್ಲಿ ಏನು ಇದೆಯೋ ಅದನ್ನು ಹೇಳಿದ್ದಾರೆ ಎಂದು ರಿಜ್ವಾನ್ ಅರ್ಷದ್ ಸಮರ್ಥಿಸಿಕೊಂಡರು.
ನಮ್ಮ ಕೈಯಲ್ಲಿ ಮೊಟ್ಟೆ ತೆಗೆದುಕೊಂಡರೆ ನೀವು ಬೀದಿಯಲ್ಲಿ ಓಡಾಟ ಮಾಡಲು ಸಾಧ್ಯವಿಲ್ಲ. ನಾವು ಮೊಟ್ಟೆ ಎಸೆದರೆ ಸಾಮಾನ್ಯ ಜನರೂ ನಿಮ್ಮ ಮುಖದ ಮೇಲೆ ಮೊಟ್ಟೆ ಎಸೆಯಬಹುದು. ಜನರು ತಮ್ಮ ಕಷ್ಟ ಸಹಿಸದೆ ಮೊಟ್ಟೆ ಎಸೆಯಬಹುದು. ನಿಮ್ಮ ಸಿಎಂ, ರಾಜ್ಯಾಧ್ಯಕ್ಷರು, ಸಂಘದ ಮುಖಂಡರ ಮನೆಯ ಮೇಲೆ ಮೊಟ್ಟೆ ಎಸೆಯುತ್ತಾರೆ ಎಂದು ರಿಜ್ವಾನ್ ಎಚ್ಚರಿಕೆ ನೀಡಿದರು.
BIG NEWS: ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ SPಯನ್ನು ಕೂಡಲೇ ಅಮಾನತುಗೊಳಿಸಿ – ಕಾಂಗ್ರೆಸ್ ಒತ್ತಾಯ
ನೀವು ನಿನ್ನೆ ಮಾಡಿದ ಕೆಲಸ ದಿನಾ ನಡೆಯುತ್ತೆ ಎಂದು ಎಚ್ಚರಿಕೆ ನೀಡಿದ ಅವರು, ಸಿಎಂ ಮನೆಯಿಂದ ಆಚೆ ಬರಲು ಸಾಧ್ಯವಿಲ್ಲ ಆ ರೀತಿಯ ಕೆಲಸ ಆಗುತ್ತದೆ. ಆದರೆ ನಾವು ಹಾಗೆ ಮಾಡಲು ತಯಾರಿಲ್ಲ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಇದ್ಯಾ? ಜನರ ಸಂಕಷ್ಟ ಆಲಿಸಲು ಸಿದ್ದರಾಮಯ್ಯ ಹೋಗಿದ್ದಾರೆ. ಅಂತಹ ಸಂದರ್ಭದಲ್ಲಿ ಇಂತಹ ಮೊಟ್ಟೆ ಎಸೆತದಂಥಾ ಘಟನೆ ಮಾಡಿದ್ದಾರೆ. ಇಂತಹ ಘಟನೆ ಮುಂದುವರಿದರೆ ಅನಾಹುತ ಸಂಭವಿಸಲಿದೆ ಎಂದರು.
BIG NEWS: ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ SPಯನ್ನು ಕೂಡಲೇ ಅಮಾನತುಗೊಳಿಸಿ – ಕಾಂಗ್ರೆಸ್ ಒತ್ತಾಯ