ಮಹಾರಾಷ್ಟ್ರ: ರಾಯಗಡದ ಕರಾವಳಿಯಲ್ಲಿ ಖಾಲಿ ದೋಣಿಯಲ್ಲಿ ಮೂರು ಎಕೆ-47ಗಳು ಮತ್ತು 10 ಬಾಕ್ಸ್ ಸಜೀವ ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸರು ಗುರುವಾರ ಬೆಳಿಗ್ಗೆ ತಿಳಿಸಿದ್ದಾರೆ. ಪತ್ತೆಯಾಗಿರುವ ದೋಣಿ, ಆಸ್ಟ್ರೇಲಿಯಾಕ್ಕೆ ಸೇರಿದ್ದು ಎನ್ನಲಾಗಿದೆ.
ದೋಣಿಯನ್ನು ವಶಪಡಿಸಿಕೊಂಡ ಹರಿಹರೇಶ್ವರದ ಕಡಲತೀರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಅಧಿಕಾರಿಗಳು ಹೆಚ್ಚಿನ ಕಟ್ಟೆಚ್ಚರ ವಹಿಸಿದ್ದಾರೆ. ಜನ್ಮಾಷ್ಟಮಿ ಹಬ್ಬಕ್ಕೆ ಒಂದು ದಿನ ಮೊದಲು ದೋಣಿ ಮತ್ತು ಆಯುಧಗಳು ಪತ್ತೆಯಾಗಿವೆ.
ಹಾಸ್ಟೆಲ್ಗೆ ನುಗ್ಗಿ ಯುವತಿಯನ್ನು ತಬ್ಬಿದ ಸೆಕ್ಯುರಿಟಿ ಗಾರ್ಡ್: ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ
ಭಾರದ್ಖೋಲ್ನಲ್ಲಿ ಲೈಫ್ ಬೋಟ್ ಕೂಡ ಪತ್ತೆಯಾಗಿದೆ ಮತ್ತು ಎರಡೂ ಖಾಲಿಯಾಗಿವೆ ಎಂದು ಸ್ಥಳೀಯ ಪೊಲೀಸರು ಎಎನ್ಐಗೆ ತಿಳಿಸಿದ್ದಾರೆ. “ಕೋಸ್ಟ್ ಗಾರ್ಡ್ ಮತ್ತು ಮಹಾರಾಷ್ಟ್ರ ಮ್ಯಾರಿಟೈಮ್ ಬೋರ್ಡ್ ಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ” ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದ್ದಾರೆ.
ಅಧಿಕಾರಿಗಳು ವಿಚಾರಣೆಗಳನ್ನು ಪ್ರಾರಂಭಿಸಿದ್ದಾರೆ. ಅಲ್ಲದೇ ಗಣೇಶೋತ್ಸವ ಸಂದರ್ಭದಲ್ಲಿ ಉಗ್ರರ ದಾಳಿ ನಡೆಸೋದಕ್ಕೆ ಸಂಚು ರೂಪಿಸಲಾಗಿದ್ಯಾ ಎನ್ನುವ ಸಂಶಯ ವ್ಯಕ್ತವಾಗಿದೆ. ಆದರೆ ಈ ಸಮಯದಲ್ಲಿ ಭಯೋತ್ಪಾದಕ ಕೋನವನ್ನು ತಳ್ಳಿಹಾಕಿದ್ದಾರೆ.
ಕೇಂದ್ರ ಸಚಿವೆ ʻಸ್ಮೃತಿ ಇರಾನಿʼಯನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಗೋವಾ ಶಾಸಕ…?
ಮುಂಬೈನಿಂದ ಸುಮಾರು 200ಕಿ.ಮೀ ದೂರದಲ್ಲಿ ದೋಣಿ ಪತ್ತೆಯಾಗಿದೆ. ಇದನ್ನು ಮೊದಲು ಪ್ರದೇಶದ ಸ್ಥಳೀಯರು ಗುರುತಿಸಿದರು, ನಂತರ ಅವರು ದೋಣಿಯ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.