ಉಡುಪಿ: ರಾಜ್ಯದಲ್ಲಿ ಭುಗಿಲೆದ್ದಿದ್ದ ಸಾವರ್ಕರ್ ಭಾವಚಿತ್ರ ಕುರಿತು ಉಡುಪಿಯಲ್ಲಿ ಕಳೆದ ಎರಡು ದಿನದಿಂದ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿಲ್ಲೆಯ ಬ್ರಹ್ಮಗಿರಿ ಸರ್ಕಲ್ ಭಾರಿ ಹೈಡ್ರಾಮ ನಡೆಯುತ್ತಿದೆ. ನಿನ್ನೆ ಅಷ್ಟೇ ಸಾವರ್ಕರ್ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಪುಷ್ಪಾರ್ಚನೆ ಮಾಡಲಾಗಿತ್ತು. ಆದರೆ ಇದೀಗ ಸರ್ಕಲ್ ನಲ್ಲಿ ಪ್ರತಿಮೆ ಸ್ಥಾಪಿಸುವುದಾಗಿ ಬಿಜೆಪಿ ನಗರಸಭೆಗೆ ಪತ್ರ ಬರೆದಿದ್ದಾರೆ.
BIGG NEWS: ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದಾಗ ಸರ್ಕಾರ ಖರ್ಚು ಮಾಡಿದ ವೆಚ್ಚವೆಷ್ಟು ಗೊತ್ತಾ? RTI ಬಹಿರಂಗ
ಇನ್ನು ಬ್ರಹ್ಮಗಿರಿ ಸರ್ಕಲ್ ನಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಸಾವರ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಫ್ಲೆಕ್ಸ್ ಹಾಕಿದ್ದರು. ಪಿಎಫ್ಐ ಮತ್ತು ಎಸ್ಡಿಪಿಐ ಅವರು ಇದರಿಂದ ಶಾಂತಿ ಕೆಡಸುತ್ತದೆ ಎಂದು ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು. ಇದಕ್ಕೆ ಕೆಲ ಕಾಂಗ್ರೆಸ್ ನಾಯಕರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ನಡುವೆ ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ನಗರಸಭೆಗೆ ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ ಪ್ರತಿಮೆ ರಚಿಸಲು ಅನುಮತಿ ಕೋರಿ ಅರ್ಜಿ ಪತ್ರವನ್ನು ಬರೆದಿದ್ದಾರೆ.