ಬ್ಯಾಂಕಾಕ್: ಭಾರತ-ಥಾಯ್ಲೆಂಡ್ ಜಂಟಿ ಆಯೋಗದ 9ನೇ ಸಭೆಯಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್ನಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಅವರು ಇಂದು ಬೆಳಗ್ಗೆ ಬ್ಯಾಂಕಾಕ್ನಲ್ಲಿರುವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಭಾರತ ಮತ್ತು ಥೈಲ್ಯಾಂಡ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವರ್ಷವನ್ನು ಆಚರಿಸುತ್ತಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜೈಶಂಕರ್, ʻಇಂದು ಬೆಳಗ್ಗೆ ಬ್ಯಾಂಕಾಕ್ನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಈ ವೇಳೆ ಫ್ರಾ ಮಹಾರಾಜಗುರು ವಿಧಿ ಅವರ ಆಶೀರ್ವಾದವನ್ನು ಪಡೆದೆ. ಇದು ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಒತ್ತಿಹೇಳುತ್ತದೆʼ ಎಂದಿದ್ದಾರೆ.
Offered prayers this morning at the Devasthana of Bangkok.
Received the blessings of Phra Maharajaguru Vidhi.
Underlines our shared religious and cultural traditions. pic.twitter.com/rqp1HfRnFU
— Dr. S. Jaishankar (@DrSJaishankar) August 18, 2022
ಜೈಶಂಕರ್ ಅವರು ಮಂಗಳವಾರ ಥಾಯ್ಲೆಂಡ್ಗೆ ಆಗಮಿಸಿದ್ದಾರೆ. ಈ ವೇಳೆ ಥೈಲ್ಯಾಂಡ್ ಪ್ರಧಾನಿ ಪ್ರಯುತ್ ಚಾನ್-ಒ-ಚಾ ಅವರನ್ನು ಭೇಟಿಯಾಗಿದ್ದಾರೆ.
ಒಂಬತ್ತನೇ ಥೈಲ್ಯಾಂಡ್-ಭಾರತ ಜಂಟಿ ಆಯೋಗದ ಸಭೆ ನಡೆದಿದೆ. ಇಲ್ಲಿ ಜೈಶಂಕರ್ ಮತ್ತು ಥಾಯ್ಲೆಂಡ್ನ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾನ್ ಪ್ರಮುದ್ವಿನಾಯ್ ನೇತೃತ್ವ ವಹಿಸಿದ್ದರು.
ಇನ್ನೂ, ಭಾರತ ಮತ್ತು ಥೈಲ್ಯಾಂಡ್ ನಡುವಿನ 8 ನೇ ಜಂಟಿ ಆಯೋಗದ ಸಭೆ (ಜೆಸಿಎಂ) 10 ಅಕ್ಟೋಬರ್ 2019 ರಂದು ನವದೆಹಲಿಯಲ್ಲಿ ನಡೆಯಿತು. ಭಾರತ ತಂಡವನ್ನು ಶ್ರೀ ಜೈಶಂಕರ್ ಮತ್ತು ಥಾಯ್ ಲ್ಯಾಂಡ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವ ಡಾನ್ ಪ್ರಮುದ್ವಿನೈ ನೇತೃತ್ವ ವಹಿಸಿದ್ದರು.
ಪ್ರೇಮ ಪ್ರಕರಣ: ಹಾಡಹಗಲೇ ಯುವತಿ ಮೇಲೆ ಗುಂಡು ಹಾರಿಸಿ ವ್ಯಕ್ತಿ ಎಸ್ಕೇಪ್… Video