ತಮಿಳುನಾಡು: ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜ ಹಾರಿಸಿ ಗೌರವ ವಂದನೆ ಸಲ್ಲಿಸಲು ರಾಜ್ಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿಯೊಬ್ಬರು ನಿರಾಕರಿಸಿದ್ದಾರೆ. ʻನಾನು ಯೆಹೋವ ಕ್ರಿಶ್ಚಿಯನ್. ನನ್ನ ಧಾರ್ಮಿಕ ನಂಬಿಕೆಯು ನನಗೆ ದೇವರಿಗೆ ಮಾತ್ರ ವಂದಿಸಲು ಅವಕಾಶ ನೀಡುತ್ತದೆ” ಎಂದು ಹೇಳಿಕೊಂಡಿದ್ದಾರೆ.
ಇಲ್ಲಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ತಮಿಳ್ ಸೆಲ್ವಿ ಅವರು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಿ ಗೌರವ ಸಲ್ಲಿಸಲು ಹಿಂದೇಟು ಹಾಕಿದ್ದಾರೆ. ಈ ವಿಷಯ ಇದೀಗ ವಿವಾದವನ್ನು ಹುಟ್ಟುಹಾಕಿದೆ.
ಮುಖ್ಯಶಿಕ್ಷಕಿ ತನ್ನ ಕೃತ್ಯವನ್ನು ಸಮರ್ಥಿಸುವ ವೀಡಿಯೋ ರೆಕಾರ್ಡಿಂಗ್ನಲ್ಲಿ, ನಾನು ಯಾಹೋವಾ ಕ್ರಿಶ್ಚಿಯನ್ ಆಗಿರುವುದರಿಂದ, ತನ್ನ ಧಾರ್ಮಿಕ ನಂಬಿಕೆಯು ದೇವರಿಗೆ ಮಾತ್ರ ವಂದಿಸಲು ಅವಕಾಶ ನೀಡುತ್ತದೆ. ಆದ್ರೆ, ನಾನು ಧ್ವಜಕ್ಕೆ ಅಗೌರವ ತೋರುವುದಿಲ್ಲ ಎಂದಿದ್ದಾರೆ.
ಈ ಮುಖ್ಯಶಿಕ್ಷಕಿ ಕಳೆದ ವರ್ಷವೂ ಧ್ವಜಾರೋಹಣ ಸಮಾರಂಭಕ್ಕೆ ಬಾರದೆ, ಅನಾರೋಗ್ಯ ರಜೆ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಹಿಂದುಳಿದ ವರ್ಗದವರಿಗೆ ಮಹತ್ವದ ಮಾಹಿತಿ: ಸಾಲ ಸೌಲಭ್ಯ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
ಪೊಲೀಸರಿಂದ ರೈಫಲ್ ಕಸಿದುಕೊಂಡು ಪರಾರಿಯಾಗಲು ಯತ್ನ: ಎಲ್ಇಟಿ ಉಗ್ರನ ಹತ್ಯೆ