ಬೆಂಗಳೂರು : ಮೀನು ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದು, ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಮೀನೂಟ ಮನೆ ಆರಂಭಿಸಲು ನಿರ್ಧರಿಸಿದೆ.
ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್.ಅಂಗಾರ, “ಮೀನುಗಾರಿಕಾ ಇಲಾಖೆಯ ವತಿಯಿಂದ ಬೆಂಗಳೂರು ಸೇರಿ ಕೆಲವು ಕಡೆಗಳಲ್ಲಿ ಮೀನು ಊಟದ ಹೋಟೇಲ್ಗಳನ್ನ ಪ್ರಾರಂಭಿಸಿಲಾಗಿತ್ತಾದ್ರೂ ವಿಸ್ತರಿಸೋಕೆ ಆಗಿರಲಿಲ್ಲ. ಹಾಗಾಗಿ ಸಧ್ಯ ಖಾಸಗಿ ಸಹಭಾಗಿತ್ವದಡಿ ರಾಜ್ಯದ ಎಲ್ಲೆಡೆ ಮೀನೂಟ ಮನೆ ಪ್ರಾರಂಭಿಸಲಿದೆ” ಎಂದರು. ಈ ಮೂಲಕ ಲಿಂಗನಮಕ್ಕಿ, ಭದ್ರಾ ಸೇರಿ ರಾಜ್ಯದ ಪ್ರಮುಖ 12 ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದ ಮೀನು ಉತ್ಪಾದನೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.