ಬೆಂಗಳೂರು: ಸಚಿವ ಜೆ.ಸಿ ಮಾಧುಸ್ವಾಮಿ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಅವರು ನಾನೇ ಮೇಧಾವಿ, ನಾನೇ ಬುದ್ಧಿವಂತ ಅಂದುಕೊಂಡಿದ್ದಾರೆ. ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ. ಸಚಿವರು ಇನ್ನೂ ಮುಂದಾದರೂ ಚೆನ್ನಾಗಿ ಕೆಲಸ ಮಾಡಿ. ಏನೇನೋ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ತರಬೇಡಿ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.
BIGG NEWS: ಬೆಂಗಳೂರಿನಲ್ಲಿ PUBG ಆಡೋಕ್ಕಾಗಿ ಮೊಬೈಲ್ ಖರೀದಿಸಲು ರಾಬರಿ ಮಾಡಿದ್ದವನ ಅರೆಸ್ಟ್ …!
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಸದನದ ಒಳಗೆ ವಿಪಕ್ಷಗಳನ್ನ ಸಮರ್ಥವಾಗಿ ಹಣಿಯುತ್ತಾರೆ. ಆದರೆ ಹೊರಗಡೆ ಯಾಕೆ ಈ ರೀತಿ ಹೇಳಿಕೆ ಕೊಡುತ್ತಾರೋ ಗೊತ್ತಿಲ್ಲ. ಯಾವ ಯಾವ ಕಾರಣಕ್ಕೋ ಸಚಿವರಾಗಿದ್ದಾರೆ. ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡ್ತೀವಿ. ಹಾದಿ ಬೀದಿಯಲ್ಲಿ ಚರ್ಚೆ ಮಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.