ಪುತ್ತೂರು : ಬೆಳ್ಳಾರೆ ಪ್ರವೀಣ್ ಹತ್ಯೆ ಬಳಿಕ ಪುತ್ತೂರು ತಾಲೂಕಿನಾದ್ಯಂತ ಜನರಲ್ಲಿ ಭಯ ಹೆಚ್ಚಾಗಿದೆ, ಈ ಬೆನ್ನಲ್ಲೇ ರಾಜ್ಯದಲ್ಲೂ ಕೋಮುಗಲಭೆಯ ಪ್ರಕರಣಗಳು ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಿರುತ್ತದೆ.
ಹಾಗಾಗಿ ಇಂದು ಬೆಳ್ಳಂಬೆಳಗ್ಗೆ ಎರಕ್ಕಳ ಎಂಬಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಆಂಧ್ರಪ್ರದೇಶ ನೋಂದಣಿಯ ಕಾರೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡಿಕೊಂಡಿದ್ದು.ಮತ್ತೊಂದು ಆತಂಕಕ್ಕೆ ಸೃಷ್ಟಿಯಾಗಿದೆ. ಬಳಿಕ ಸ್ಥಳೀಯರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಈತನನ್ನು ವಶಕ್ಕೆ ಪಡೆಯಲಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕಿನಿಂದ ಬೆಳ್ಳಾರೆ ಸುಳ್ಯ ಸುತ್ತಮುತ್ತ ಪೊಲೀಸರು ಮತ್ತಷ್ಟು ಗಸ್ತು ತಿರುಗುತ್ತಿದ್ದಾರೆ.
ಎರಕ್ಕಳಪರಿಸರದಲ್ಲಿ ವಿಳಾಸ ಹುಡುಕುವ ನೆಪದಲ್ಲಿ ಓಡಾಡಿಕೊಂಡಿದ್ದು, ಮೊಬೈಲ್ ಫೋನ್ ಒಂದನ್ನು ಖಾಲಿ ಜಾಗಕ್ಕೆ ಬಿದ್ದರುತ್ತದೆ. ವ್ಯಕ್ತಿಯ ಈ ನಡವಳಿಕೆ ಗಮನಿಸಿ ಅನುಮಾನಗೊಂಡಿದ್ದಾರೆ. ಪೊಲೀಸರು ಈತನನ್ನು ವಶಕ್ಕೆ ಪಡದು ವಿಚಾರಣೆ ನಡೆಸುತ್ತಿದ್ದು ಮೇಲ್ನೋಟಕ್ಕೆ ಅನೈತಿಕ ಚಟುವಟುಕೆಗಾಗಿ ಬಂದಿರುವ ಶಂಕೆಯಿದ್ದು ಹೆಚ್ಚಿನ ಮಾಹಿತಿ ಇನ್ನೇನು ತಿಳಿಯಬೇಕಾಗಿದೆ.