ತಿರುಮಲ: ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ ವರುಣ ಅಬ್ಬರದಿಂದ ಭಕ್ತರಿಗೆ ಸಾಕಷ್ಟು ತೊಂದರೆಯಾಗಿತ್ತು. ಆದರೆ ಇದೀಗ ತಿರುಪತಿ ದೇವಸ್ಥಾನದಲ್ಲಿ ತಿರುಮಲ ಶ್ರೀವಾರಿ ವಿಶೇಷ ಪ್ರವೇಶ ದರ್ಶನದ ಟಿಕೆಟ್ ನಾಳೆ ಬಿಡುಗಡೆಯಾಗಲಿದೆ.
ಅಕ್ಟೋಬರ್ ತಿಂಗಳ ಕೋಟಾವನ್ನು ಗುರುವಾರ ಬೆಳಗ್ಗೆ 9 ಗಂಟೆಗೆ ವೆಬ್ಸೈಟ್ನಲ್ಲಿ ಲಭ್ಯವಾಗುವಂತೆ ಮಾಡಲು ಟಿಡಿಪಿ ವ್ಯವಸ್ಥೆ ಮಾಡಿದೆ. ವಿವಿಧ ಸ್ಲಾಟ್ಗಳಲ್ಲಿ 300 ರೂಪಾಯಿಯ ವಿಶೇಷ ಪ್ರವೇಶ ದರ್ಶನ ಟಿಕೆಟ್ ನೀಡಲಾಗುವುದು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರಹ್ಮೋತ್ಸವದ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಟಿಕೆಟ್ ನೀಡಲಾಗುತ್ತದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 5 ರವರೆಗೆ ಸರ್ವದರ್ಶನ ಹೊರತುಪಡಿಸಿದ ದರ್ಶನಗಳನ್ನು ರದ್ದುಗೊಳಿಸಲಾಗಿದೆ. ಭಕ್ತರು ಇದನ್ನು ಗಮನಿಸಿ ಅದರಂತೆ ದರ್ಶನವನ್ನು ಕಾಯ್ದಿರಿಸುವಂತೆ ಎಂದು ಟಿಟಿಡಿ ಸೂಚಿಸಿದೆ.
ವಾರಾಂತ್ಯದಲ್ಲಿ ಸಾಲು ಸಾಲು ರಜೆಗಳು ಬರುತ್ತಿರುವುದರಿಂದ ತಿರುಮಲದಲ್ಲಿ ಜನರು ಸಾಗರ ಹರಿದು ಬರಲಿದೆ. ಸಾಮಾನ್ಯ ಭಕ್ತರ ಅನುಕೂಲಕ್ಕಾಗಿ ಶಿಫಾರಸ್ಸು ಪತ್ರಗಳ ಮೇಲಿನ ಬ್ರೇಕ್ ದರ್ಶನವನ್ನು ಆಗಸ್ಟ್ 21ರವರೆಗೆ ರದ್ದುಗೊಳಿಸಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ.