ಬೆಂಗಳೂರು: ರಾಜ್ಯದಲ್ಲಿ ಮರಳಿನ ಅಭಾವ ತಪ್ಪಿಸಲು, ಎಂ-ಸ್ಯಾಂಡ್ ಉತ್ತೇಜಿಸುವ ಸಲುವಾಗಿ, ಸರ್ಕಾರದಿಂದ ಮರಳು ನೀತಿಗೆ ಶೀಘ್ರದಲ್ಲೇ ತಿದ್ದುಪಡಿ ತರಲಾಗುತ್ತಿದೆ. ಈ ಮೂಲಕ ಮನೆ ಕಟ್ಟಲು ಮರಳಿನ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಲಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ಸಚಿವ ಹಾಲಪ್ಪ ಆಚಾರ್, ರಾಜ್ಯದಲ್ಲಿ ಮರಳಿನ ಅಭಾವವನ್ನು ನಿವಾರಿಸೋ ನಿಟ್ಟಿನಲ್ಲಿ ಹಾಗೂ ಎಂ-ಸ್ಯಾಂಡ್ ಅನ್ನು ಉತ್ತೇಜಿಸೋ ಸಲುವಾಗಿ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಮರಳು ನೀತಿಗೆ ತಿದ್ದುಪಡಿ ತರಲಾಗುವುದು ಎಂಬುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ವಾರ್ಷಿಕವಾಗಿ ಮರಳು 45 ದಶಲಕ್ಷ ಟನ್ ನಷ್ಟಿದ್ದು, 35 ದಶಲಕ್ಷ ಟನ್ ಮರಳಷ್ಟೇ ಪೂರೈಕೆಯಾಗುತ್ತಿದೆ. ಹೀಗಾಗಿ ಉಳಿದ ಬೇಡಿಕೆಯನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಎಂ-ಸ್ಯಾಂಡ್ ಗೆ ಉತ್ತೇಜಿಸೋ ಸಲುವಾಗಿ ಮರಳು ನೀತಿಯನ್ನು ತಿದ್ದುಪಡಿ ಮಾಡಲಾಗುತ್ತದೆ ಎಂದರು.
ಕಾನೂನು ವ್ಯಾಪ್ತಿಯಲ್ಲಿ ಜಲ್ಲಿ ಕ್ರಷರ್ ಸ್ಥಾಪನೆಗೆ ಅನುಮತಿ ನೀಡಲಾಗುವುದು. ಈ ಮೂಲಕ ಮರಳಿನ ಕೊರತೆ ನಿವಾರಿಸಲು ನೆರವಾಗಲಿದೆ. ಗುಣಮಟ್ಟದ ಆಧಾರದ ಮೇಲೆ ಪ್ರತಿ ಟನ್ ಗೆ ರೂ 700ರಿಂದ 1000ದರವೆರೆಗೆ ಎಂ-ಸ್ಯಾಂಡ್ ಲಭ್ಯವಿದೆ ಎಂದು ಹೇಳಿದ್ದಾರೆ.
ಜನತೆಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ಅಮುಲ್, ಮದರ್ ಡೈರಿ ಹಾಲಿನ ದರ 2 ರೂ ಹೆಚ್ಚಳ | Milk Price Hike