ಮಡಿಕೇರಿ: ಜಿಲ್ಲೆಯಲ್ಲಿ ತೃತೀಯ ಲಿಂಗಿ ಒಬ್ಬರಿಗೆ ಮನೆ ಬಾಡಿಗೆ ಸಿಗದ ಕಾರಣದಿಂದಾಗಿ, ತಮಗೆ ದಯಾಮರಣ ಕಲ್ಪಿಸುವಂತೆ ಕೋರಿ, ಕೋರ್ಟ್ ಗೆ ಅರ್ಜಿ ಸಲ್ಲಿಸಿರೋ ಪ್ರಸಂಗ ಬೆಳಕಿಗೆ ಬಂದಿದೆ.
ಮಡಿಕೇರಿಯಲ್ಲಿ ವಾಸವಾಗಿದ್ದಂತ ತೃತೀಯ ಲಿಂಗಿ ಒಬ್ಬರಿಗೆ, ವಾಸವಾಗಲು ತೃತೀಯ ಲಿಂಗಿ ಎನ್ನುವ ಕಾರಣದಿಂದ ಬಾಡಿಗೆ ಮನೆ ಸಿಕ್ಕಿರಲಿಲ್ಲ. ಹೀಗಾಗಿ ಕೊಡಗು ಜಿಲ್ಲಾಧಿಕಾರಿಗೆ ದಯಾಮರಣ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವಂತ ದಯಾಮರಣ ಕೋರಿದ ಪತ್ರದಲ್ಲಿ, ತೃತೀಯ ಲಿಂಗಿ ಎನ್ನುವ ಕಾರಣದಿಂದಾಗಿ ತಮಗೆ ಯಾರೂ ಬಾಡಿಗೆ ಮನೆ ನೀಡುತ್ತಿಲ್ಲ. ಭಿಕ್ಷೆ ಬೇಡಿ ಬದುಕುತ್ತಿರುವ ನಾನು, ಲಾಡ್ಜ್ ನಲ್ಲಿ ವಾಸವಾಗಿದ್ದೇನೆ. ಬಾಡಿಗೆ ಮನೆ ಸಿಗದ ಕಾರಣ, ತಮಗೊಂದು ಮನೆ ಕೊಡಿಸುವಂತೆಯೂ ಕೋರಿಕೊಂಡಿದ್ದಾರೆ.
ಈಗಾಗಲೇ ಅನೇಕ ಬಾರಿ ಜಿಲ್ಲಾಧಿಕಾರಿಗಳಾದಂತ ತಮಗೆ ಪತ್ರ ಬರೆದು ಈ ಬಗ್ಗೆ ಮನವರಿಕೆ ಮಾಡಲಾಗಿದೆ. ಆದ್ರೇ ಇದುವರೆಗೆ ಯಾವುದೇ ಪ್ರತ್ಯುತ್ತರ ಸಿಕ್ಕಿಲ್ಲ. ಹೀಗಾಗಿ ಈಗ ಕೊನೆಯದಾಗಿ ಪತ್ರ ಬರೆಯುತ್ತಿದ್ದೇನೆ. ತಮಗೆ ಗಾಳಿಬೀಡು, ಜಂಬೂರಿನಲ್ಲಿ ಮನೆ ಕೊಡಿಸಿ, ಇಲ್ಲವೇ ದಯಾಮರಕ್ಕೆ ಆದ್ರೇ ದಿನಾಂಕ ನಿಗದಿ ಮಾಡಿ ಎಂಬುದಾಗಿ ಹೇಳಿದ್ದಾರೆ.