ಬೆಂಗಳೂರು: ಸ್ವಾತಂತ್ರಯ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಆಗಸ್ಟ್ 15ರಂದು ನಮ್ಮ ಮೆಟ್ರೋದಲ್ಲಿ ( Namma Metro ) ಒಂದೇ ದಿನ ಬರೋಬ್ಬರಿ 8.25 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಈ ಮೂಲಕ 1.24 ಕೋಟಿ ಆದಾಯ ಗಳಿಸಿ, ಹೊಸ ದಾಖಲೆಯನ್ನು ನಮ್ಮ ಮೆಟ್ರೋ ಬರೆದಿದೆ.
BIG NEWS: ಬಿಬಿಎಂಪಿ 243 ವಾರ್ಡ್ ಮೀಸಲಾತಿ ಪಟ್ಟಿ ಫೈನಲ್: ಆ.3ರ ಪಟ್ಟಿಯನ್ನೇ ಯಥಾವತ್ ಉಳಿಸಿಕೊಂಡ ಸರ್ಕಾರ
ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ, ಕಾಂಗ್ರೆಸ್ ಹಾಗೂ ಬಿಜೆಪಿ ಸಮಾವೇಶಕ್ಕೆ ಲಕ್ಷಆಂತರ ಮಂದಿ ನಮ್ಮ ಮೆಟ್ರೋ ರೈಲಿನಲ್ಲೇ ಬಂದು ಹೋಗಿದ್ದಾರೆ. ಹೀಗಾಗಿ ಮೆಟ್ರೋ ನಿಲ್ದಾಣಗಳು ಹಾಗೂ ರೈಲುಗಳು ಆಗಸ್ಟ್ 15ರ ಸೋಮವಾರದಂದು ಇಡೀ ದಿನ ದಟ್ಟಣೆಯಿಂದ ಕೂಡಿತ್ತು.
ಜನತೆಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ಅಮುಲ್, ಮದರ್ ಡೈರಿ ಹಾಲಿನ ದರ 2 ರೂ ಹೆಚ್ಚಳ | Milk Price Hike
ಬಸವನಗುಡಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಅಂದಾಜು 2 ಲಕ್ಷ ಮಂದಿ ನಮ್ಮ ಮೆಟ್ರೋ ರೈಲಿನಲ್ಲಿಯೇ ತೆರಳಿದ್ದಾರೆ. ಹೀಗಾಗಿ ನಮ್ಮ ಮೆಟ್ರೋ ರೈಲಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅತಿಹೆಚ್ಚು ಪ್ರಯಾಣಿಕರು ಸಂಚರಿಸಿ, ಇಷ್ಟು ಆದಾಯ ಒಂದೇ ದಿನಗದಲ್ಲಿ ಬರುವಂತಾಗಿ ಹೊಸ ದಾಖಲೆಯನ್ನು ಬರೆದಿದೆ.