ಇಸ್ಲಾಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ತೈಲ ಟ್ಯಾಂಕರ್ಗೆ ಪ್ರಯಾಣಿಕರ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 20 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಮುಲ್ತಾನ್-ಸುಕ್ಕೂರ್ ಮೋಟಾರುಮಾರ್ಗದಲ್ಲಿ (ಎಂ-5) ಮಂಗಳವಾರ ಮುಂಜಾನೆ ಅಪಘಾತ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಲಾಹೋರ್ನಿಂದ ಕರಾಚಿಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್, ಮೋಟಾರ್ವೇಯಲ್ಲಿ ಇಂಟರ್ಚೇಂಜ್ನಲ್ಲಿ ಹಿಂಭಾಗದಿಂದ ತೈಲ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿರಾರು ಲೀಟರ್ ಪೆಟ್ರೋಲ್ ತುಂಬಿ ಹೊತ್ತೊಯ್ತಿದ್ದ ಟ್ಯಾಂಕರ್ಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಚಾಲಕ ನಿದ್ದೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ದೇಶದ ಜನತೆಗೆ ಬಿಗ್ ಶಾಕ್ ರೆಡಿ: ಮುಂದಿನ ತಿಂಗಳು ಮತ್ತೆ ಜಿಎಸ್ಟಿ ಪರಿಷ್ಕರಣೆ | GST Council Meeting
BIGG NEWS : ‘ವಿಶ್ವದ ಅತಿ ದೊಡ್ಡ ವಿಮಾನ’ ಶೀಘ್ರ ಬೆಂಗಳೂರಿಗೆ ಆಗಮನ ; ಅ.31ರಿಂದ ‘ಜಂಬೋ ಜೆಟ್’ ನಿಯೋಜನೆ