ಮೈಸೂರು: ಅಂದುಕೊಂಡಂತೆ ಕಾಮಗಾರಿ ಸಾಗಿದ್ದರೇ ಆಗಸ್ಟ್ 15ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಒನ್ ವೇ ಸಂಚಾರಕ್ಕೆ ಚಾಲನೆ ನೀಡಬೇಕಿತ್ತು. ಆದ್ರೇ ದಶಪಥ ಕಾಮಗಾರಿಯಿಂದಾಗಿ ಬೆಂಗಳೂರು – ಮೈಸೂರು ಹೆದ್ದಾರಿ ಮೊದಲ ಹಂತದ ಕಾಮಗಾರಿ ವಿಳಂಬವಾಗಿದೆ. ಹೀಗಾಗಿ ಕೊಟ್ಟ ಮಾತಿಗೆ ತಪ್ಪಿದ್ದೇನೆ. ದಯವಿಟ್ಟು ಕ್ಷಮಿಸಿ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ( MP Prathap Simha ) ಜನತೆಯ ಕ್ಷಮೆಯಾಚಿಸಿದ್ದಾರೆ.
BIGG NEWS : ಸ್ವಾತಂತ್ರ್ಯ ಬಂದರೂ ಸಮಾನತೆ, ಸಹೋದರತೆ ಧರ್ಮಾಧಾರಿತವಾಗುತ್ತಿದೆ : ಮಾಜಿ ಸಿಎಂ ಸಿದ್ದರಾಮಯ್ಯ
ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿದ್ದು, ಜುಲೈನಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆಯನ್ನು ಸಂಚಾರಕ್ಕೆ ತೆರವು ಮಾಡಿಸುತ್ತೇನೆ ಎಂದಿದ್ದೆ, ನಂತರ ಆಗಸ್ಟ್ 15 ರಂದು ಬಿಡದಿ, ರಾಮನಗರ-ಚನ್ನಪಟ್ಟಣ ಬೈಪಾಸ್ ಓಪನ್ ಮಾಡುತ್ತೇವೆ ಎಂದೆ. ಮಾತಿಗೆ ತಪ್ಪಿದ್ದೇನೆ, ದಯವಿಟ್ಟು ಕ್ಷಮಿಸಿ. ಎಲ್ಲ ಪ್ರಯತ್ನಗಳ ನಡುವೆಯೂ ಇನ್ನೂ ವಾರ, ಹತ್ತು ದಿನಗಳ ಕೆಲಸ ಬಾಕಿಯಿದೆ. ಗುಡ್ಡ ಕಡಿದು ರಸ್ತೆ ನಿರ್ಮಾಣ ನಡೆಯುತ್ತಿದೆ, ಸ್ವಲ್ಪ ಕಾಲಾವಕಾಶ ನೀಡಿ, ಪ್ಲೀಸ್ ಎಂದಿದ್ದಾರೆ.
BIGG NEWS : ಅಮೃತ ಸರೋವರ ಯೋಜನೆಯಲ್ಲಿ 100 ಕೆರೆಗಳ ಅಭಿವೃದ್ಧಿ : ಸಚಿವ ಹಾಲಪ್ಪ ಆಚಾರ
ಅಂದಹಾಗೇ ಬೆಂಗಳೂರು ಮೈಸೂರು ಹೆದ್ದಾರಿ ಮೊದಲ ಹಂತದ ಕಾಮಗಾರಿ ಜುಲೈ ವೇಳೆಗೆ ಮುಗಿಯೋ ನಿರೀಕ್ಷೆಯಿತ್ತು. ಆದ್ರೇ.. ದಶಪಥ ಕಾಮಗಾರಿಯಿಂದಾಗಿ ವಿಳಂಬಗೊಂಡಿತ್ತು. ಇದೇ ಕಾರಣದಿಂದಾಗಿ ಆಗಸ್ಟ್ 15ರ ಇಂದು ಒನ್ ವೇ ಸಂಚಾರಕ್ಕೂ ಅಧಿಕೃತವಾಗಿ ಚಾಲನೆ ನೀಡೋದಕ್ಕೆ ಸಾದ್ಯವಾಗಿರಲಿಲ್ಲ. ಹೀಗಾಗಿಯೇ ಸಂಸದ ಪ್ರತಾಪ್ ಸಿಂಹ ಜನತೆಯಲ್ಲಿ ಕ್ಷಮೆ ಕೋರಿದ್ದಾರೆ.