ಅಸ್ಸಾಂ: ಆತ ಅಂತರ್ಜಾತಿ ವಿವಾಹವಾಗಿದ್ದನು. ಇದೇ ಕಾರಣದಿಂದಾಗಿ ಗ್ರಾಮದಿಂದಲೂ ಭಹಿಷ್ಕಾರಕ್ಕೂ ಒಳಗಾಗಿದ್ದನು. ಹೀಗೆ ಅಂತರ್ಜಾತಿ ವಿವಾಹವಾಗಿ, ಗ್ರಾಮದಿಂದ ಭಹಿಷ್ಕಾರಕ್ಕೆ ಒಳಗಾದಂತ ವ್ಯಕ್ತಿ ಸಾವನ್ನಪ್ಪಿದಾಗ, ಆತನ ಅಂತ್ಯ ಸಂಸ್ಕಾರವನ್ನು ಎರಡು ಬಾರಿ ಮಾಡಿರೋ ಘಟನೆ ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ನಡೆದಿದೆ.
ಅಸ್ಸಾಂನ ಗೌಹಾತಿ ಬಳಿಯ ದರ್ರಾಂಗ್ ಜಿಲ್ಲೆಯಲ್ಲಿನ ಪಟೋಲ್ಸಿಂಗ್ಪರಾ ಗ್ರಾಮದ ನಿವಾಸಿಯಾಗಿದ್ದಂತ ಅತುಲ್ ಶರ್ಮಾ(50) ಎಂಬಾತ ಅಂತರ್ಜಾತಿ ವಿವಾಹವಾಗಿದ್ದನು. ಹೀಗಾಗಿಯೇ ಗ್ರಾಮದಿಂದ 27 ವರ್ಷಗಳ ಕಾಲ ಬಹಿಷ್ಕಾರಕ್ಕೆ ಒಳಗಾಗಿದ್ದನು.
BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ
ಕಳೆದ ಮಂಗಳವಾರದಂದು ಅತುಲ್ ಶರ್ಮಾ ನಿಧನರಾಗಿದ್ದರಿಂದಾಗಿ, ಗ್ರಾಮಸ್ಥರಾರು ಆತನ ಅಂತ್ಯಸಂಸ್ಕಾರಕ್ಕೆ ಮುಂದಾಗಿಲ್ಲ. ಅಲ್ಲದೇ ಅವರ ಪುತ್ರ ದೂರದ ಊರಿನಲ್ಲಿ ಇದ್ದ ಕಾರಣ, ಅಂತ್ಯಸಂಸ್ಕಾರಕ್ಕೆ ಬರಲು ಆಗಿರಲಿಲ್ಲ.
BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ
ಈ ವೇಳೆಯಲ್ಲಿ ಮೃತ ಅತುಲ್ ಶರ್ಮಾ ಸಹೋದನೊಬ್ಬನೇ ಒಂಟಿಯಾಗಿ ಅವರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಈ ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದಂತ ತಾಲೂಕು ಆಡಳಿತದ ಅಧಿಕಾರಿಗಳು ಮತ್ತೆ ಮೃತದೇಹವನ್ನ ಹೊರ ತೆಗೆದು, ಶವಪರೀಕ್ಷೆ ನಡೆಸಿದ ಬಳಿಕ, ಹಿಂದೂ ಸಂಪ್ರದಾಯದಂತೆ ಪುತ್ರನ ಕೈಯಿಂದಲೇ ಆಗ್ನಿ ಸ್ಪರ್ಶ ಮಾಡಿಸಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.