ಬೆಂಗಳೂರು: ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದಂತ ಅಧಿಕಾರಿಗಳಿಗೆ ಕೇಂದ್ರ ಗೃಹ ಮಂತ್ರಿ ಪದಕವನ್ನು ನೀಡಲಾಗುತ್ತಿದೆ. ಅದರಂತೆ ಈ ಬಾರಿ 151 ಮಂದಿಗೆ ನೀಡಲಾಗಿದೆ. ಇವರಲ್ಲಿ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಪದಕದ ಗೌರವ ಸಂದಿದೆ.
BREAKING NEWS: ಸನ್ನಡತೆಯ ಆಧಾರದ ಮೇಲೆ ಈ ಬಾರಿ ರಾಜ್ಯಾಧ್ಯಂತ 81 ಖೈದಿಗಳ ಬಿಡುಗಡೆ: ರಾಜ್ಯಪಾಲರ ಅಂಕಿತ
ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯದಿಂದ ಪದಕದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉತ್ಕೃಷ್ಟ ಸೇವೆಗಾಗಿ 2022ನೇ ಸಾಲಿನ ಕೇಂದ್ರ ಗೃಹ ಮಂತ್ರಿ ಪದಕವನ್ನು ಪ್ರಕಟಿಸಲಾಗಿದೆ. ಈ ಬಾರಿ 151 ಸಾಧಕರಿಗೆ ಪದಕವನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.
ಹೀಗಿದೆ.. ಕೇಂದ್ರ ಗೃಹ ಮಂತ್ರಿ ಪದಕ ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿಗಳ ಪಟ್ಟಿ
- ಲಕ್ಷ್ಮೀ ಗಣೇಶ್ ಕೆ, ಹೆಚ್ಚುವರಿ ಎಸ್ಪಿ
- ವೆಂಕಟಪ್ಪ ನಾಯಕ, ಡಿವೈಎಸ್ಪಿ
- ಮೈಸೂರು ರಾಜೇಂದ್ರ ಗೌತಮ್, ಡಿವೈಎಸ್ಪಿ
- ಶಂಕರ್ ಕಾಳಪ್ಪ ಮರಿಹಾಳ್, ಡಿವೈಎಸ್ಪಿ
- ಶಂಕರಗೌಡ ವೀರಗೌಡ ಪಾಟೀಲ್, ಡಿವೈಎಸ್ಪಿ
- ಗುರುಬಸವರಾಜ್ ಹೆಚ್ ಹಿರೇಗೌಡರ್, ಸಿಪಿಐ