ಕೊಡಗು: ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯಲ್ಲಿ ಪತ್ನಿ ಮೇಲೆ ಅನುಮಾನಗೊಂಡು ಪತಿ ಕೋವಿನಿಂದ ಹತ್ಯೆ ಮಾಡಿರುವ ಘಟನೆ ನಡೆದಿದೆ.
BIGG NEWS: ಸಿನಿಮಾ ಪ್ರೋಡಕ್ಷನ್ ಉತ್ತೇಜಿಸಲು ಭಾರತ-ಆಸ್ಟ್ರೇಲಿಯಾ ಒಪ್ಪಂದಕ್ಕೆ ಸಂಪುಟದ ಅನುಮೋದನೆ
34 ವರ್ಷದ ಸುಷ್ಮಾ ಹತ್ಯೆಯಾದ ಪತ್ನಿ. ಬಟ್ಟೀರ ಗೋಪಾಲ ಅಲಿಯಾಸ್ ಕಿಶನ್ ಎಂಬಾತನಿಂದ ಈ ಕೃತ್ಯ ನಡೆದಿದೆ.ಹಲವು ವರ್ಷಗಳಿಂದ ಇವರಿಬ್ಬರ ನಡುವೆ ಜಗಳವಾಗುತ್ತಿತ್ತು. ಈ ವೇಳೆ ಒಂಟಿನಳಿಕೆ ಕೋವಿಯಿಂದ ಎದೆಯ ಭಾಗಕ್ಕೆ ಗುಂಡಿಕ್ಕಿ ಕೊಂದಿದ್ದಾನೆ.
ಇನ್ನು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಥೆ ಕಟ್ಟಿ ಬೆಂಗಳೂರಿನಲ್ಲಿರುವ ತನ್ನ ಮಗ ನಿಧಿ ಹಾಗೂ ಪತ್ನಿಯ ತಂಗಿ ಶುಭಾ ಹಾಗೂ ಪತ್ನಿಯ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಾನೆ. ಸುಶ್ಮಾ ಸಾವಿನ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ನಿನ್ನೆ ರಾತ್ರಿ ಚೆಟ್ಟಹಳ್ಳಿ ಪೋಲೀಸ್ ಉಪಠಾಣೆಗೆ ದೂರು ನೀಡಿದ್ದಾರೆ.
BIGG NEWS: ಸಿನಿಮಾ ಪ್ರೋಡಕ್ಷನ್ ಉತ್ತೇಜಿಸಲು ಭಾರತ-ಆಸ್ಟ್ರೇಲಿಯಾ ಒಪ್ಪಂದಕ್ಕೆ ಸಂಪುಟದ ಅನುಮೋದನೆ
ನಂತರ ಮೇಲಾಧಿಕಾರಿಗಳ ಆದೇಶದ ಮೇಲೆ ಎಎಸ್ಐ ಪಿ.ಟಿ.ಶ್ರೀನಿವಾಸ್ ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಈ ವೇಳೆ ತಾನೇ ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಈತ ಪೊಲೀಸರ ವಶದಲ್ಲಿ ಇದ್ದಾನೆ.