ಕೇರಳ: ಕೇರಳದ ಮಲಪ್ಪುರಂನ ಮಹಿಳೆಯೊಬ್ಬರು ತನ್ನ ಮಗ 10 ನೇ ತರಗತಿಯಲ್ಲಿದ್ದಾಗ ಓದಲು ಪ್ರಾರಂಭಿಸಿದ್ದರು. ಆದರೆ, ಇದು ಕೇರಳ PSC ಪರೀಕ್ಷೆಗಳಿಗೆ ತಯಾರಾಗಲು ಅವರನ್ನು ಪ್ರೇರೇಪಿಸಿತು. ಇವರ ಕಲಿಕೆಯು ಇದೀಗ ಕೇರಳದ ಸಾರ್ವಜನಿಕ ಸೇವಾ ಆಯೋಗದ (ಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ.
ಹೌದು, 42 ವರ್ಷದ ಬಿಂದು ಎಂಬಾಕೆ ತನ್ನ ಮಗನನ್ನು ನ್ನ ಮಗ 10 ನೇ ತರಗತಿಯಲ್ಲಿದ್ದಾಗ ಅವನನ್ನು ಪ್ರೋತ್ಸಾಹಿಸಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದಳು. ಈ ಕಲಿಕೆಯೊಂದಿಗೆ ಇದೀಗ ಅವರು ಲೋವರ್ ಡಿವಿಜನಲ್ ಕ್ಲರ್ಕ್ (LDC) ಪರೀಕ್ಷೆಯಲ್ಲಿ 92ನೇ ರ್ಯಾಂಕ್ನೊಂದಿಗೆ ಉತ್ತೀರ್ಣರಾಗಿದ್ದರೆ. ಆಕೆಯ 24 ವರ್ಷದ ಮಗ ವಿವೇಕ್ ಕೂಡ ಎಲ್ಡಿಸಿ ಪರೀಕ್ಷೆಯಲ್ಲಿ 38ನೇ ರ್ಯಾಂಕ್ ಪಡೆದಿದ್ದಾರೆ.
ನಾವು ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕು ಎಂಬ ಗುರಿನ್ನಿಟ್ಟುಕೊಂಡು ಒಟ್ಟಿಗೆ ಕೋಚಿಂಗ್ ಕ್ಲಾಸ್ಗೆ ಹೋಗಿ ಕಲಿತಿದ್ದೇವೆ. ಇದಕ್ಕೆ ಎಲ್ಲರಿಂದಲೂ ಸಾಕಷ್ಟು ಪ್ರೇರಣೆ ಸಿಕ್ಕಿದೆ. ಸತತ ಪ್ರಯತ್ನಗಳಿಂದಾಗಿ ಇದೀಗ ನಾವಿಬ್ಬರೂ ಅರ್ಹತೆ ಪಡೆದಿದ್ದೇವೆ. ನಾವಿಬ್ಬರೂ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.
ಬಿಂದು ಅವರು ಕಳೆದ 10 ವರ್ಷಗಳಿಂದ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕೇರಳದಲ್ಲಿ ಸ್ಟ್ರೀಮ್-2 ಹುದ್ದೆಗಳಿಗೆ ವಯಸ್ಸಿನ ಮಿತಿ 40. ಆದರೆ, ನಿರ್ದಿಷ್ಟ ವರ್ಗಗಳಿಗೆ ಕೆಲವು ವಿನಾಯಿತಿಗಳಿವೆ. ಇತರೆ ಹಿಂದುಳಿದ ವರ್ಗಗಳ ಗುಂಪಿನಲ್ಲಿ ಮೂರು ವರ್ಷಗಳವರೆಗೆ ಸಡಿಲಿಕೆ ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಧವೆಯರಿಗೆ ಇದು ಐದು ವರ್ಷಗಳವರೆಗೆ ಇರುತ್ತದೆ.
BIGG NEWS: ಇಂದು ICAI ಸಿಎ ಫೌಂಡೇಶನ್ ಫಲಿತಾಂಶ ಪ್ರಕಟ; ಇಲ್ಲಿದೆ ವಿವರ
BIG BREAKING NEWS: ಸಿಲಿಕಾನ್ ಸಿಟಿಯಲ್ಲಿ IAS ಹೆಸರೇಳಿ KAS ಪಾಸ್ ಮಾಡಿಸ್ತೀನಿ ಎಂದು ಹಣ ಪೀಕುತ್ತಿದ್ದವನ ಬಂಧನ