ಬೆಂಗಳೂರು: ಕೋರ್ಟ್ ನಿಂದ ಮಾಧ್ಯಮಗಳ ವಿರುದ್ಧ ನಿರ್ಬಂಧ ತರೋ ಸಂಬಂಧ ಸಲ್ಲಿಸಿದಂತ ದಾಖಲೆಗಳಲ್ಲಿ ನಕಲಿ ದಾಖಲೆ ಸಲ್ಲಿಕೆ ಆರೋಪದಲ್ಲಿ, ಇದೀಗ ಸೂಪರ್ ಸ್ಟಾರ್ ರಜನಿ ಕಾಂತ್ ( Super Star Rajanikanth ) ಪತ್ನಿ ಲತಾಗೆ ಸಂಕಷ್ಟ ಎದುರಾಗಿದೆ. ಸುಳ್ಳು ಹೇಳಿಕೆ ಪ್ರಕರಣವನ್ನು ರದ್ದುಗೊಳಿಸಿರುವಂತ ಹೈಕೋರ್ಟ್, ಇನ್ನುಳಿದಂತ ಪೋರ್ಜರಿ, ವಂಚನೆ ಪ್ರಕರಣ ಸಂಬಂಧ ವಿಚಾರಣೆ ಮುಂದುವರೆಸೋದಕ್ಕೆ ಅಸ್ತು ಎಂದಿದೆ. ಹೀಗಾಗಿ ರಜನಿಕಾಂತ್ ಪತ್ನಿ ಲತಾಗೆ ಸಂಕಷ್ಟ ಎದುರಾಗಿದೆ.
2014ರಲ್ಲಿ ನಟ ರಜನಿಕಾಂತ್ ನಟನೆಯ ಕೊಚಾಡಿಯನ್ ಸಿನಿಮಾ ನಿರ್ಮಿಸಿತ್ತು. 125 ಕೋಟಿ ರೂ ಬಜೆಟ್ ನಲ್ಲಿ ಸಿದ್ಧಪಡಿಸಿದ್ದಂತ ಈ ಸಿನಿಮಾ ತೆರೆ ಕಂಡ ನಂತ್ರ ಕೇವಲ 42 ಕೋಟಿ ರೂ ಗಳಿಸಿ ನಷ್ಟ ಉಂಟಾಗಿತ್ತು.
ಈ ಸಿನಿಮಾದಿಂದ ನಷ್ಟ ಉಂಟಾದ್ರೇ.. ನಷ್ಟ ಭರ್ತಿಯನ್ನು ತುಂಬಿಕೊಡೋದಾಗಿ ಶೂರಿಟಿಯನ್ನು ರಜನಿಕಾಂತ್ ಪತ್ನಿ ಲತಾ ಸಹಿ ಮಾಡಿದ್ದರು. ರಜನಿಕಾಂತ್ ಪುತ್ರಿ ಸೌಂದರ್ಯಾ ನಿರ್ದೇಶನ ಮಾಡಿದ್ದರು. ಆದ್ರೇ.. ನಿರ್ಮಾಪಕರಿಗೆ ನಷ್ಟ ಭರ್ತಿ ತುಂಬಿ ಕೊಡೋದಾಗಿ ಸಹಿ ಮಾಡಿದ್ದರೂ ಕೊಡ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು.
ಮಾದ್ಯಮಗಳಲ್ಲಿ ಈ ಸಂಬಂಧ ವರದಿಯನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಬೆಂಗಳೂರಿನ ಪ್ರೆಸ್ ಕ್ಲಬ್ ವಿಳಾಸದ ಸಂಬಂಧಸಿದ ನಕಲಿ ದಾಖಲೆಗಳನ್ನು ಬಳಕೆ ಮಾಡಿದಂತ ಆರೋಪವಿತ್ತು. ಈ ಸಂಬಂಧ ಮೆ.ಆಡ್ ಬ್ಯುರೋ ಅಡ್ವಟೈಸಿಂಗ್ ಪ್ರೈ.ಲಿ ಖಾಸಗಿ ದೂರು ನೀಡಿತ್ತು. ಈ ದೂರಿನ ಹಿನ್ನಲೆಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಕೂಡ ದಾಖಲಿಸಿದ್ದರು.
ಇಂದು ಈ ಸಂಬಂಧ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರನ್ನು ಒಳಗೊಂಡಂತ ಏಕ ಸದಸ್ಯ ನ್ಯಾಯಪೀಠವು, ಲತಾ ರಜನಿಕಾಂತ್ ವಂಚನೆ, ಸುಳ್ಳು ಹಾಗೂ ಪೋರ್ಜರಿ ಪ್ರಕರಣ ರದ್ದು ಪಡಿಸೋ ಸಂಬಂಧ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಿದರು.
ಐಪಿಸಿ ಸೆಕ್ಷನ್ 196, 199 ಮತ್ತು 420 ಪ್ರಕರಣಗಳನ್ನು ರದ್ದು ಪಡಿಸಿದೆ. ಆದ್ರೇ.. ಐಪಿಸಿ ಸೆಕ್ಷನ್ 463, 465 ಅಡಿ ದಾಖಲಾಗಿರುವಂತ ಪ್ರಕರಣವನ್ನು ಮುಂದುವರೆಸೋದಕ್ಕೆ ಅಸ್ತು ಎಂದಿದೆ. ಹೀಗಾಗಿ ಒಂದೆಡೆ ಬಿಗ್ ರಿಲೀಫ್ ಸಿಕ್ಕಿದ್ರೇ, ಮತ್ತೊಂದೆಡೆ ಬಿಗ್ ಶಾಕ್ ಕೂಡ ನೀಡಲಾಗಿದೆ.