ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ( Chief Minister ) ಬದಲಾವಣೆ ಎಂಬುದು ಕಾಂಗ್ರೆಸ್ ( Congress ) ಕಾಣುತ್ತಿರುವ ಕನಸು. ಬೊಮ್ಮಾಯಿ ಅವರ ದಕ್ಷ ನಾಯಕತ್ವದಲ್ಲಿ ಬಿಜೆಪಿ ಸರಕಾರ ಸುಭದ್ರವಾಗಿದೆ. ಆದರೆ ಕಾಂಗ್ರೆಸ್ ನ ಡಬಲ್ ಡೋರ್ ಬಸ್ಸಿನಿಂದ ಯಾರು, ಯಾರನ್ನು ಕೆಳಗಿಳಿಸುತ್ತಾರೆ ಎಂಬುದು ಸದ್ಯದಲ್ಲೇ ಗೊತ್ತಾಗುತ್ತದೆ. ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಹೇಳಿದ್ದಾರೆ.
ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಎಂಬುದು ಕಾಂಗ್ರೆಸ್ ಕಾಣುತ್ತಿರುವ ಕನಸು.
ಬೊಮ್ಮಾಯಿ ಅವರ ದಕ್ಷ ನಾಯಕತ್ವದಲ್ಲಿ ಬಿಜೆಪಿ ಸರಕಾರ ಸುಭದ್ರವಾಗಿದೆ.
ಆದರೆ ಕಾಂಗ್ರೆಸ್ ನ ಡಬಲ್ ಡೋರ್ ಬಸ್ಸಿನಿಂದ ಯಾರು, ಯಾರನ್ನು ಕೆಳಗಿಳಿಸುತ್ತಾರೆ ಎಂಬುದು ಸದ್ಯದಲ್ಲೇ ಗೊತ್ತಾಗುತ್ತದೆ.
4/4
— Dr Sudhakar K (@mla_sudhakar) August 9, 2022
ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, ಮುಖ್ಯಮಂತ್ರಿ ಸ್ಥಾನದ ಘನತೆ- ಗೌರವಗಳನ್ನು ಹಾಳುಗೆಡವಿದ್ದೇ ಕಾಂಗ್ರೆಸ್. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮನೆಯ ಗೇಟ್ ಕೀಪರ್ ಗಳ ರೀತಿ ಕಾಂಗ್ರೆಸ್ ಮುಖ್ಯಮಂತ್ರಿಗಳು ವರ್ತಿಸಿದ್ದು ಇತಿಹಾಸ. ಆದರೆ ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತಿರುವ ರಾಜ್ಯದ ಇಬ್ಬರು ಹಿರಿಯ ನಾಯಕರು ಈಗಲೇ ಗಾಂದಿ ಕುಟುಂಬದ ಗೇಟ್ ಕಾಯುತ್ತಿರುವುದು ವರ್ತಮಾನ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಘನತೆ- ಗೌರವಗಳನ್ನು ಹಾಳುಗೆಡವಿದ್ದೇ ಕಾಂಗ್ರೆಸ್.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮನೆಯ ಗೇಟ್ ಕೀಪರ್ ಗಳ ರೀತಿ ಕಾಂಗ್ರೆಸ್ ಮುಖ್ಯಮಂತ್ರಿಗಳು ವರ್ತಿಸಿದ್ದು ಇತಿಹಾಸ.
ಆದರೆ ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತಿರುವ ರಾಜ್ಯದ ಇಬ್ಬರು ಹಿರಿಯ ನಾಯಕರು ಈಗಲೇ ಗಾಂದಿ ಕುಟುಂಬದ ಗೇಟ್ ಕಾಯುತ್ತಿರುವುದು ವರ್ತಮಾನ.
3/4
— Dr Sudhakar K (@mla_sudhakar) August 9, 2022
ದೇವರಾಜ್ ಅರಸು ಅವರು ಇನ್ನೂ ಅಧಿಕಾರದಲ್ಲಿದ್ದಾಗಲೇ ಗುಂಡಾರಾವ್ ಅವರನ್ನು ದೆಹಲಿಗೆ ಕರೆಸಿಕೊಂಡು ನೀವೇ ಸಿಎಂ ಎಂದಿದ್ದರು ಇಂದಿರಾ ಗಾಂಧಿ ಅವರು. ಶರ್ಟು ಬದಲಾಯಿಸುವಷ್ಟೇ ವೇಗವಾಗಿ ವಿರೇಂದ್ರ ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಎಂದು ಹೇಳಿದ್ದಾರೆ.
ದೇವರಾಜ್ ಅರಸು ಅವರು ಇನ್ನೂ ಅಧಿಕಾರದಲ್ಲಿದ್ದಾಗಲೇ ಗುಂಡಾರಾವ್ ಅವರನ್ನು ದೆಹಲಿಗೆ ಕರೆಸಿಕೊಂಡು ನೀವೇ ಸಿಎಂ ಎಂದಿದ್ದರು ಇಂದಿರಾ ಗಾಂಧಿ ಅವರು.
ಶರ್ಟು ಬದಲಾಯಿಸುವಷ್ಟೇ ವೇಗವಾಗಿ ವಿರೇಂದ್ರ ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು.
1/4
— Dr Sudhakar K (@mla_sudhakar) August 9, 2022
ನಮ್ಮ ರಾಜ್ಯ ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಮುಂತಾದ ಅನೇಕ ಪ್ರಭಾವಿ ನಾಯಕರು ಕಾಂಗ್ರೆಸ್ ಪಕ್ಷ ತೊರೆಯಲು ಕಾರಣ ನಿಮ್ಮ ಹೈಕಮಾಂಡ್ ಸಂಸ್ಕೃತಿ ಅಲ್ಲದೆ ಇನ್ನೇನು? ಎಂದು ಪ್ರಶ್ನಿಸಿದ್ದಾರೆ.
ನಮ್ಮ ರಾಜ್ಯ ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಮುಂತಾದ ಅನೇಕ ಪ್ರಭಾವಿ ನಾಯಕರು ಕಾಂಗ್ರೆಸ್ ಪಕ್ಷ ತೊರೆಯಲು ಕಾರಣ ನಿಮ್ಮ ಹೈಕಮಾಂಡ್ ಸಂಸ್ಕೃತಿ ಅಲ್ಲದೆ ಇನ್ನೇನು?
3/4
— Dr Sudhakar K (@mla_sudhakar) August 9, 2022
ಸ್ವಪಕ್ಷದವರನ್ನು ಬಿಡಿ ತಮ್ಮ ತಾಳಕ್ಕೆ ಕುಣಿಯದ ಬೇರೆ ಪಕ್ಷದ ಮುಖ್ಯಮಂತ್ರಿಗಳನ್ನೂ ಸಹಿಸಿದ ಕಾಂಗ್ರೆಸ್ ಹೈಕಮಾಂಡ್ ಸಂವಿಧಾನದ 356ನೇ ವಿಧಿಯನ್ನು ಬರೋಬ್ಬರಿ 93 ಬಾರಿ ದುರುಪಯೋಗ ಮಾಡಿ ಸರ್ಕಾರಗಳನ್ನು ಉರುಳಿಸಿರುವುದು ಕರಾಳ ಸತ್ಯ. ಇಂತಹ ಹೈಕಮಾಂಡ್ ಎಂಬ ವಿಕೃತಿಯ ಸೃಷ್ಟಿಕರ್ತರಾದ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಾಠ ಕಲಿಯಬೇಕಾಗಿಲ್ಲ ಎಂಬುದಾಗಿ ಕಿಡಿಕಾರಿದ್ದಾರೆ.
ಸ್ವಪಕ್ಷದವರನ್ನು ಬಿಡಿ ತಮ್ಮ ತಾಳಕ್ಕೆ ಕುಣಿಯದ ಬೇರೆ ಪಕ್ಷದ ಮುಖ್ಯಮಂತ್ರಿಗಳನ್ನೂ ಸಹಿಸಿದ ಕಾಂಗ್ರೆಸ್ ಹೈಕಮಾಂಡ್ ಸಂವಿಧಾನದ 356ನೇ ವಿಧಿಯನ್ನು ಬರೋಬ್ಬರಿ 93 ಬಾರಿ ದುರುಪಯೋಗ ಮಾಡಿ ಸರ್ಕಾರಗಳನ್ನು ಉರುಳಿಸಿರುವುದು ಕರಾಳ ಸತ್ಯ.
ಇಂತಹ ಹೈಕಮಾಂಡ್ ಎಂಬ ವಿಕೃತಿಯ ಸೃಷ್ಟಿಕರ್ತರಾದ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಾಠ ಕಲಿಯಬೇಕಾಗಿಲ್ಲ.
4/4
— Dr Sudhakar K (@mla_sudhakar) August 9, 2022