ಮುಂಬೈ: ಖ್ಯಾತ ಮರಾಠಿ ನಟ ಪ್ರದೀಪ್ ಪಟವರ್ಧನ್ (Marathi Actor Pradeep Patwardhan) ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
65 ವರ್ಷದ ಪಟವರ್ಧನ್ ದಕ್ಷಿಣ ಮುಂಬೈನ ಗಿರ್ಗಾಂವ್ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಚಷ್ಮೆ ಬಹದ್ದಾರ್, ಏಕ್ ಶೋಧ್ ಮತ್ತು ಮೀ ಶಿವಾಜಿರಾಜೆ ಭೋಸ್ಲೆ ಬೋಲ್ಟಾಯ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಪ್ರದೀಪ್ ಹೆಸರುವಾಸಿಯಾಗಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪಟವರ್ಧನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಮರಾಠಿ ಚಿತ್ರರಂಗದಲ್ಲಿ ತಮ್ಮ ಆಕರ್ಷಕ ನಟನೆಯಿಂದ ಪ್ರೇಕ್ಷಕರ ಹೃದಯವನ್ನು ಆಳಿದ ಎವರ್ ಗ್ರೀನ್ ನಟ ಪ್ರದೀಪ್ ಪಟವರ್ಧನ್ ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಮರಾಠಿ ಕಲಾ ಜಗತ್ತು ಒಬ್ಬ ಮಹಾನ್ ಕಲಾವಿದನನ್ನು ಕಳೆದುಕೊಂಡಿದೆ” ಎಂದು ಸಿಎಂ ಟ್ವಿಟ್ಟರ್ನಲ್ಲಿ ಮರಾಠಿಯಲ್ಲಿ ಬರೆದಿದ್ದಾರೆ.
मराठी रंगभूमीवरील मोरूची मावशी, बायको असून शेजारी, लग्नाची बेडी तसेच मराठी चित्रपटसृष्टीत आपल्या सहजसुंदर अभिनयाने रसिक प्रेक्षकांच्या हृदयावर अधिराज्य गाजवणारे सदाबहार अभिनेते प्रदीप पटवर्धन यांचे दुःखद निधन झाले. त्यांच्या जाण्याने मराठी कलासृष्टीने उमद्या कलावंताला गमावले आहे. pic.twitter.com/CVjESFYCkf
— Eknath Shinde – एकनाथ शिंदे (@mieknathshinde) August 9, 2022
Big news: ಒಂದು ತಿಂಗಳೊಳಗೆ ದೇಶದಲ್ಲಿ 5G ಇಂಟರ್ನೆಟ್ ಸೇವೆ ಲಭ್ಯ: ಟೆಲಿಕಾಂ ರಾಜ್ಯ ಸಚಿವ ದೇವುಸಿನ್ ಚೌಹಾಣ್
Breaking news: ಮಹಿಳೆ ಮೇಲೆ ಹಲ್ಲೆ, ನಿಂದನೆ ಆರೋಪ: ಯುಪಿ ರಾಜಕರಣಿ ಶ್ರೀಕಾಂತ್ ತ್ಯಾಗಿ ಅರೆಸ್ಟ್