ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ಹೊಸಕೋಟೆ ನಗರದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಕೆಹೆಚ್ಬಿ ಬಡಾವಣೆ ಬಳಿ ಜಲಾವೃತಗೊಂಡಿದ್ದು, ಇಲ್ಲಿದೆ ಜನರು ಮಳೆಯ ಆರ್ಭಟಕ್ಕೆ ತತ್ತರಿಸಿದ್ದಾರೆ.
ಕೆಹೆಚ್ಬಿ ಬಡಾವಣೆ ಬಳಿಯಿರುವ ಕೆರೆ ತುಂಬಿ ಲೇಔಟ್ನಲ್ಲಿರುವ ಮನೆಗಳಿಗೆ ಕೆರೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಮಳೆಯಿಂದಾಗಿ ಸುತ್ತಮುತ್ತದ ರಸ್ತೆಗಳು ಕೆಸರು ಗದ್ದೆಯಂತಾಗಿದೆ. ಸ್ಥಳೀಯ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.