ಬೆಂಗಳೂರು: ರಾಜ್ಯ ಸರ್ಕಾರವು ಮುಂಬರುವ ಶೈಕ್ಷಣಿಕ ವರ್ಷದಿಂದ ಮಕ್ಕಳನ್ನು 1ನೇ ತರಗತಿಗೆ ದಾಖಲಿಸಲು 6 ವರ್ಷ ಪೂರ್ಣಗೊಂಡಿರಬೇಕು ಎಂಬುದಾಗಿ ಹೊಸ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಅನೇಕ ಯುಕೆಜಿ ಮಕ್ಕಳಿಗೆ ಈ ವರ್ಷ ಫೇಲ್ ಭೀತಿ ಕಾಡುತ್ತಿದೆ. ಈ ಮೂಲಕ ಮಕ್ಕಳ ಪೋಷಕರಿಗೆ ರಾಜ್ಯ ಸರ್ಕಾರ ಹೊರಡಿಸಿರುವಂತ 1ನೇ ತರಗತಿ ಪ್ರವೇಶಾತಿ ಆದೇಶ ಫಜೀತಿ ತಂದಿಟ್ಟಿದೆ.
BIG NEWS: ತಪ್ಪಿನ ಅರಿವಾಗಿದೆ, ಕ್ಷಮಿಸಿ: ‘ನಟ ದರ್ಶನ್ ಅಭಿಮಾನಿ’ಗಳಿಂದ ‘ಅಪ್ಪು ಅಭಿಮಾನಿ’ಗಳಿಗೆ ಕ್ಷಮೆಯಾಚನೆ
ಸಾರ್ವಜನಿಕ ಶಿಕ್ಷಣ ಇಲಾಖೆಯು 2023-24ನೇ ಸಾಲಿನ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ಪ್ರವೇಶಾತಿಗೆ 6 ವರ್ಷ ಪೂರ್ಣಗೊಂಡಿರಬೇಕು ಎಂಬುದಾಗಿ ಆದೇಶಿಸಲಾಗಿತ್ತು. ಶಿಕ್ಷಣ ಇಲಾಖೆಯ ಹೊಸ ನಿಯಮದಿಂದ ಪ್ರಸ್ತುತ ಎಲ್ ಕೆಜಿ, ಯುಕೆಜಿಯಲ್ಲಿ ಓದುತ್ತಿರುವ ಸಾವಿರಾರು ಮಕ್ಕಳು ಅನಗತ್ಯವಾಗಿ 1 ವರ್ಷ ಮನೆಯಲ್ಲಿ ಉಳಿಯಬೇಕಾದ ಸ್ಥಿತಿಯ ಜೊತೆಗೆ, ಪೋಷಕರಿಗೆ ಆರ್ಥಿಕ ಹೊರೆ ಆತಂಕ ಎದುರಾಗಿದೆ.
ಈ ಹಿಂದೆ ನಿಗದಿಪಡಿಸಿದ್ದ ವಯೋಮಿತಿಯಂತೆ 3 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಈ ಬಾರಿ ಎಲ್ ಕೆಜಿಗೆ ದಾಖಲಿಸಿಕೊಳ್ಳಲಾಗಿದೆ. ಅದೇ ರೀತಿ ಕಳೆದ ವರ್ಷ ಎಲ್ ಕೆಜಿಯಲ್ಲಿದ್ದ ಮಕ್ಕಳು ಈಗ ಯುಕೆಜಿಯಲ್ಲಿದ್ದು, ಅವರಿಗೆ 4 ವರ್ಷ 5 ತಿಂಗಳು ಪೂರ್ಣಗೊಂಡಿದೆ. ಇವರಲ್ಲಿ ಬಹುತೇಕರಿಗೆ ಮುಂದಿನ ಶೈಕ್ಷಣಿಕ ವರ್ಷದ ಜೂನ್.1ಕ್ಕೆ 6 ವರ್ಷ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಈ ಮಕ್ಕಳ ಭವಿಷ್ಯವೇನು ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೇ ಇಂತಹ ಮಕ್ಕಳನ್ನು ಮತ್ತೆ ಯುಕೆಜಿಯಲ್ಲಿ ಉಳಿಸಿಕೊಂಡರೇ, ಆ ಮಕ್ಕಳನ್ನು ಫೇಲ್ ಮಾಡಿದಂತಾಗುತ್ತದೆ. ಇದು ಮಗುವಿನ ಮೇಲೆ ಮಾನಸಿಕ ಪರಿಣಾಮ ಬೀರುತ್ತದೆ. ಜೊತೆಗೆ ಪೋಷಕರಿಗೆ ಆರ್ಥಿಕ ನಷ್ಟವನ್ನು ಉಂಟು ಮಾಡಲಿದೆ.
ಇನ್ನೂ ಮತ್ತೊಮ್ಮೆ ಯುಕೆಜಿಯಲ್ಲಿನ ಮಕ್ಕಳನ್ನು ಯುಕೆಜಿಯಲ್ಲಿ ಶಾಲೆಗಳು ಉಳಿಸಿಕೊಳ್ಳಲು ಹಿಂದೇಟು ಹಾಕಬಹುದು. ಒಂದು ವೇಳೆ ಇರಿಸಿಕೊಂಡ್ರೇ.. ಶುಲ್ಕ ಪಾಲತಿಸಬೇಕಾಗುತ್ತದೆ. ಒಂದು ವೇಳೆ ಮಕ್ಕಳನ್ನು ಒಂದು ವರ್ಷ ಮನೆಯಲ್ಲಿಟ್ಟುಕೊಳ್ಳಿ ಎಂಬುದಾಗಿ ಶಾಲೆಗಳು ಹೇಳಿದ್ರೇ.. ಆರ್ ಟಿಇ ಕಾಯ್ದೆ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳ ಉಲ್ಲಂಘನೆಯಾಗಲಿದೆ. ಹೀಗಾಗಿ ಶಿಕ್ಷಣ ಇಲಾಖೆಯ ಈ ಆವೈಜ್ಞಾನಿಕ ನಿಯಮ ಬಿಟ್ಟು, ಈ ಹಿಂದೆ ಇದ್ದಂತ ದಾಖಲಾತಿ ನಿಯಮವನ್ನೇ ಮುಂದುವರೆಸುವಂತೆ ಅನೇಕ ಪೋಷಕರು ಒತ್ತಾಯಿಸಿದ್ದಾರೆ.