ಧಾರವಾಡ: ಹಾಲು ಮಾರುವ ನೆಪದಲ್ಲಿ ಗ್ರಾಮೀಣ ಜನರಿಗೆ ನೈಜ ನೋಟಿನಂತೆ ಖೋಟಾ ನೋಟುಗಳನ್ನು ( Counterfeit notes ) ಮಾರಾಟ ಮಾಡುತ್ತಿದ್ದಂತ ಬಿಜೆಪಿ ಮುಖಂಡನನ್ನು ( BJP Leader ) ಪೊಲೀಸರು ಇಂದು ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದಂತ ಆರೋಪಹ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ಸಾಗರ್ ಕಾಶಪ್ಪ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಬಂಧಿತ ಬಿಜೆಪಿ ಮುಖಂಡ ಸಾಗರ್ ಕಾಶಪ್ಪ, ಹಾಲು ಮಾರುವ ನೆಪದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಇಂದು ಖಚಿತ ಮಾಹಿತಿಯ ಮೇರೆಗೆ ಧಾರವಡದ ಕುಂದಗೋಳ ಠಾಣೆಯ ಪೊಲೀಸರು ದಾಳಿ ನಡೆಸಿ, ಮೂವರನ್ನು ಬಂಧಿಸಿದ್ದಾರೆ.