ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವಂತ ವಾಣಿ ವಿಲಾಸ ಸಾಗರ ಅಣೆಕಟ್ಟು ( Vani vilasa Sagara Dam ) ಭರ್ತಿಗೆ ಕ್ಷಣ ಗಣನೆ ಆರಂಭಗೊಂಡಿದೆ. ಹಲವು ವರ್ಷಗಳ ಬಳಿಕ ವಿವಿ ಸಾಗರ ಡ್ಯಾಂ ಭರ್ತಿಯಾಗುತ್ತಿರೋದಕ್ಕೆ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಮಾರಿಕಣಿವೆ ಡ್ಯಾಂ ಎಂಬುದಾಗಿಯೇ ಪ್ರಸಿದ್ಧಿ ಗಳಿಸಿರುವಂತ ಏಷ್ಯಾದ ಅತ್ಯಂತ ದೊಡ್ಡ ಅಣೆಕಟ್ಟು ವಿವಿಸಾಗರಕ್ಕೆ ಹಿಂಭಾಗದಲ್ಲಿ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವಂತ ಮಳೆಯಿಂದಾಗಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಈ ಕಾರಣದಿಂದಾಗಿಯೇ ಡ್ಯಾಂ ನಲ್ಲಿನ ನೀರಿನ ಸಂಗ್ರಹ ಪ್ರಮಾಣ ಕೂಡ ಹೆಚ್ಚಾಗುತ್ತಿದೆ.
ಅಂದಹಾಗೇ 129 ಅಡಿ ಗರಿಷ್ಠ ಭರ್ತಿ ಮಟ್ಟವನ್ನು ಹೊಂದಿರುವಂತ ವಿವಿ ಸಾಗರ ಡ್ಯಾಂನಲ್ಲಿ 1957ರ ಬಳಿಕ 125 ಅಡಿಗಳಷ್ಟು ನೀರು ಭರ್ತಿಯಾಗಿದೆ. 4.50 ಅಡಿಗಳು ಕೋಡಿಗೆ ಬಾಕಿ ಇದೆ. ಈ ನೀರಿನ ಮಟ್ಟ ಭರ್ತಿಯಾದ್ರೇ.. ವಾಣಿ ವಿಲಾಸ ಡ್ಯಾಂ ಸಂಪೂರ್ಣ ಭರ್ತಿಯಾದಂತೆ ಆಗಲಿದೆ.