ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್2022ರಲ್ಲಿ ( Common wealth Games 2022 ) ಭಾರತದ ಪದಕದ ಬೇಟೆ ಮುಂದುವರೆದಿದೆ. ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ( Lakshya Sen ) 19-21, 21-9, 21-16ರಲ್ಲಿ ಮಲೇಷ್ಯಾದ ಎನ್ಜಿ ತ್ಸೆ ಯಾಂಗ್ ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದಾರೆ. ಈ ಗೆಲುವಿನೊಂದಿಗೆ ಭಾರತ ತನ್ನ 20ನೇ ಚಿನ್ನದ ಪದಕವನ್ನು ದಾಖಲಿಸಿದೆ.
ಈ ಮೊದಲು ಭಾರತದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ ಸಿಂಧು ಅವರು ಸ್ವರ್ಣ ಪದಕ ಗೆದ್ದಿದ್ದರು. ಈ ಮೂಲಕ ಐತಿಹಾಸಿಕ ದಾಖಲೆಯನ್ನು ಬರೆದಿದ್ದರು. ಈ ಬೆನ್ನಲ್ಲೇ ಇದೀಗ ಕಾಮನ್ ವೆಲ್ತ್ ಗೇಮ್ಸ್ ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತದ ಲಕ್ಷ್ಯ ಸೇನ್ ( India’s Lakshya Sen won gold ) ಮಲೇಷ್ಯಾದ ಎದುರಾಳಿ ಕ್ರೀಡಾಪಟುವನ್ನು ಸೋಲಿಸಿ ಬಂಗಾರವನ್ನು ಗೆದ್ದಿದಾರೆ.
#CommonwealthGames2022 | Indian badminton player Lakshya Sen beats NG Tze Yong of Malaysia 19-21 21-9 21-16 to win Men's Singles gold
With this victory, India records its 20th Gold in the #CWG2022 pic.twitter.com/Eidc6zdC2d
— ANI (@ANI) August 8, 2022