ಬೆಂಗಳೂರು: ಭಾಷೆ ಧರ್ಮ ಸಂಸ್ಕೃತಿ ಮತ್ತು ನಂಬಿಕೆಗಳ ಸಂರಕ್ಷಣೆಗೆ ಸಮುದಾಯಗಳು ಒಗ್ಗಟ್ಟನಿಂದ ಇರುವುದು ಅಗತ್ಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ
ರಾಜಾಜಿನಗರದ ಭಾವಸಾರ ಕ್ಷತ್ರಿಯ ಸಂಘವು ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದಂತ ಅವರು, ದುಬಾರಿ ಶಾಲಾ ಕಾಲೇಜುಗಳಿಗೆ ಸೇರಿಸಿದ ಮಾತ್ರಕ್ಕೆ ಮಕ್ಕಳ ಭವಿಷ್ಯ ಉಜ್ವಲವಾಗುವುದಿಲ್ಲ. ಹಾಗೆಯೇ ಒಳ್ಳೆಯ ಅಂಕಗಳನ್ನು ಗಳಿಸಿದ ಮಾತ್ರಕ್ಕೂ ನೆಮ್ಮದಿ ಸಿಗುವುದಿಲ್ಲ ಚಿಕ್ಕಂದಿನಿಂದಲೇ ತಾಯಂದಿರು ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ರೂಢಿಸುವುದು ಅತ್ಯಂತ ಅಗತ್ಯ. ಇದೇ ಬದುಕಿನ ಸುಖದ ಮೂಲವಾಗಿದೆ ಎಂದು ಅವರು ಹೇಳಿದರು.
ಉದ್ಯೋಗಾಕಾಂಕ್ಷಿಗಳೇ ಗಮನಿಸಿ :` IBPS’ನಿಂದ 6,342 ಹುದ್ದೆಗಳಿಗೆ ಅರ್ಜಿ ಆಹ್ವಾನ : ಇಲ್ಲಿದೆ ಮಾಹಿತಿ
ಗರ್ಭಾವಸ್ಥೆಯಿಂದ ಹಿಡಿದು 12ನೇ ವರ್ಷವಾಗುವವರೆಗೂ ಮಕ್ಕಳು ಅತ್ಯುತ್ತಮ ಗ್ರಹಿಕೆ ಹೊಂದಿರುತ್ತಾರೆ. ಆದ್ದರಿಂದ ಈ ವಯಸ್ಸಿನಲ್ಲಿ ಅವರಿಗೆ ಕುಟುಂಬದಲ್ಲಿ ಭದ್ರ ಬುನಾದಿ ಮತ್ತು ಮೌಲ್ಯಗಳ ಅಭ್ಯಾಸ ಆಗಬೇಕು ಎಂದು ಅವರು ತಿಳಿಹೇಳಿದರು.
ದೊಡ್ಡವರಾದವರು ಕೂಡ ಚಿಕ್ಕ ಮಕ್ಕಳಿನಿಂದ ಕಲಿಯಬೇಕಾದ ಸಂಗತಿಗಳು ಸಾಕಷ್ಟಿವೆ. ಆದ್ದರಿಂದ ನಾವು ಮಕ್ಕಳಿಗೆ ಅತ್ಯುತ್ತಮ ಸಂಗತಿಗಳನ್ನು ಕಲಿಸಬೇಕೇ ವಿನಾ ಅವರನ್ನು ಸವಲತ್ತುಗಳ ವರ್ತುಲದೊಳಗೆ ಸಾಕಬಾರದು ಎಂದು ಅವರು ಸಲಹೆ ನೀಡಿದರು.
ಮಕ್ಕಳು ಶಾಲೆಗೆ ಹೋಗುವುದು ಕಲಿಕೆಯ ಒಂದು ಸಾಧನವಷ್ಟೆ. ಆದರೆ ನಿಜ ಜೀವನದಲ್ಲಿ ಅನುಭವಗಳೊಂದಿಗೆ ಮಕ್ಕಳು ಕಲಿಯಬೇಕು ಬದುಕಿಗಿಂತ ದೊಡ್ಡ ವಿಶ್ವವಿದ್ಯಾಲಯ ಯಾವುದೂ ಇಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು
ಕಾರ್ಯಕ್ರಮದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಹತ್ತಾರು ಮುಖಂಡರು ಮತ್ತು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು