ಎಮೈಸೂರು: ಬಿಜೆಪಿಯ ಹರ್ ಘರ್ ತಿರಂಗಾದ ಬಗ್ಗೆ ಟೀಕಿಸುವ ಭರದಲ್ಲಿ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ರಾಷ್ಟ್ರಧ್ವಜದ ( National Flag ) ಬಣ್ಣವನ್ನೇ ತಪ್ಪಾಗಿ ಹೇಳುವ ಮೂಲಕ ಎಡವಟ್ಟು ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಬಿಜೆಪಿಯಿಂದ ಕೆರೆ ನೀಡಿರುವಂತ ಹರ್ ಘರ್ ತಿರಂಗಾ ಬಗ್ಗೆ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದರು. ಈ ವೇಳೆಯಲ್ಲಿ ರಾಷ್ಟ್ರಧ್ವಜದ ಬಣ್ಣವನ್ನು ಕೆಂಪು, ಬಿಳಿ, ಹಸಿರು ಎಂಬುದಾಗಿ ತಪ್ಪಾಗಿ ಹೇಳಿ, ಯಡವಟ್ಟು ಕೂಡ ಮಾಡಿದ್ರು..
ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವು ಕಾಂಗ್ರೆಸ್ ನಿಂದಲೇ ಆಗಿದ್ದು. ಈಗ ಬಿಜೆಪಿಯವರು ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಗಾಂಧೀಜಿ, ತಿಲಕರು ಮಾಡಿದಂತ ತ್ಯಾಗ, ಬಲಿದಾನದ ಸಂಕೇತ ಸ್ವಾತಂತ್ರ್ಯವಾಗಿದೆ. ತ್ಯಾಗ, ಶಾಂತಿ, ಸಮೃದ್ಧಿ ಈ ದೇಶದ ರಾಷ್ಟ್ರಧ್ವಜವಾಗಿದೆ. ಇದೇ ಧ್ವಜವನ್ನು ವೀರ ಸಾರ್ವಕರ್ ವಿರೋಧ ಮಾಡಿದ್ದರು ಎನ್ನುತ್ತಲೇ ಕೇಸರಿ, ಬಿಳಿ ಹಸಿರಿನ ಬಣ್ಣದ ಧ್ವಜ ಎನ್ನುವ ಬದಲಾಗಿ, ಕೆಂಪು, ಬಿಳಿ, ಹಸಿರು ಎಂಬುದಾಗಿ ತಪ್ಪಾಗಿ ಹೇಳಿದ್ರು.
ಭಾರತದ ಸ್ವಾತಂತ್ರ್ಯಕ್ಕಾಗಿ ಹಿಂದೂ, ಕ್ರಿಶ್ಚಿಯನ್, ಮುಸ್ಲೀಂ ಎಲ್ಲರೂ ಹೋರಾಟ ಮಾಡಿದ್ದಾರೆ. ಆದ್ರೇ ಬಿಜೆಪಿ, ಜೆಡಿಎಸ್ ನವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಆರ್ ಎಸ್ ಎಸ್ 1925ರಲ್ಲಿ ಆರಂಭವಾದಾಗ ಹೆಗ್ಡೇವಾರ್ ಅಧ್ಯಕ್ಷರಾಗಿದ್ದರು. 1951ರಲ್ಲಿ ಜನಸಂಘ ಆರಂಭವಾಗಿದ್ದು, 1980ರಲ್ಲಿ ಬಿಜೆಪಿ ಪಕ್ಷವಾಗಿದೆ. ಇಂತಹ ಪಕ್ಷದವರು ಈಗ ಹರ್ ಘರ್ ತಿರಂಗಾ ಎನ್ನುತ್ತಿದ್ದಾರೆ, ಆಜಾದಿ ಕಾ ಅಮೃತ್ ಮಹೋತ್ಸವ ಎಂಬ ಮುಖವಾಡ ಹಾಕಿದ್ದಾರೆ ಎಂದು ಕಿಡಿಕಾರಿದರು.