ಕೆಎನ್ ಎನ್ ನ್ಯೂಸ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಕ್ರೇಜ್ ಆಗಿ ಬಿಟ್ಟಿದೆ. ಇವಾಗ ಎಲ್ಲರು ಹತ್ರನೂ ಮೊಬೈಲ್ ಇದ್ದೆ ಇರುತ್ತದೆ.
VIRAL VIDEO: ವ್ಹೀಲ್ ಚೇರಲ್ಲಿದ್ದವರನ್ನು ಟ್ರಾಫಿಕ್ ಪೊಲೀಸ್ ಹಿಂದಕ್ಕೆ ಕಳುಹಿಸುತ್ತಿರೋ VIDEO ವೈರಲ್
ಸುಂದರ ತಾಣಗಳಲ್ಲಿ ಸುಂದರ ಅನುಭವಗಳನ್ನು ಸೆರೆ ಹಿಡಿಯಲು ಸೆಲ್ಫಿ ತೆಗೆದುಕೊಳ್ಳುವುದು ಹುಚ್ಚು ಎಲ್ಲರಲ್ಲೂ ಇದೆ. ಎಲ್ಲಾದ್ರೂ ಹೊರಗಡೆ ಹೋದಾಗ ಅಥವಾ ಸ್ನೇಹಿತರೆಲ್ಲ ಸೇರಿದ್ದಾಗ ಸೆಲ್ಫಿ ತೆಗೆದುಕೊಳ್ಳುವುದು ಕಾಮನ್. ಆದರೆ ನೀವೊಂದು ವಿಷಯವನ್ನು ತಿಳಿದುಕೊಳ್ಳಲೇ ಬೇಕು.
ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ತುಂಬಾ ಹೆಚ್ಚಾಗಿದೆ. ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುತ್ತದೆ. ಸ್ಮಾರ್ಟ್ಫೋನ್ಗಳಲ್ಲಿ ಹೆಚ್ಚು ಬಳಕೆಯಾಗುವುದು ಸೆಲ್ಫಿ. .ಆದರೆ ಕೆಲವರು ಯಾವಾಗಲೂ ಕೈಯಲ್ಲಿ ಫೋನ್ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಾನೆ ಇರುತ್ತಾರೆ.ಆಗಾಗ್ಗೆ ಫೋಟೋಗಳನ್ನು ತೆಗೆದುಕೊಳ್ಳುವುದು ಸಹ ಮಾನಸಿಕ ಅಸ್ವಸ್ಥತೆಯ ಲಕ್ಷಣವಾಗಿದೆ ಎಂದು ತಜ್ಞರು ನಂಬುತ್ತಾರೆ.
VIRAL VIDEO: ವ್ಹೀಲ್ ಚೇರಲ್ಲಿದ್ದವರನ್ನು ಟ್ರಾಫಿಕ್ ಪೊಲೀಸ್ ಹಿಂದಕ್ಕೆ ಕಳುಹಿಸುತ್ತಿರೋ VIDEO ವೈರಲ್
ಯುವಜನತೆಯಲ್ಲಿ ಈ ಅಭ್ಯಾಸ ಹೆಚ್ಚಿದೆ. ವೈದ್ಯರ ಪ್ರಕಾರ, ಸೆಲ್ಫಿಗಳು ವ್ಯಕ್ತಿಯ ಸ್ವಯಂ ಗ್ರಹಿಕೆಯನ್ನು ಬದಲಾಯಿಸಬಹುದು. ಈ ಅಭ್ಯಾಸವು ಅವರ ಆಲೋಚನಾ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದರಲ್ಲೂ ಅವರ ಸಾಮಾಜಿಕ ನಡವಳಿಕೆಯ ಮೇಲೆ ಪರಿಣಾಮ ಬೀರಿದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ತಜ್ಞರು.
VIRAL VIDEO: ವ್ಹೀಲ್ ಚೇರಲ್ಲಿದ್ದವರನ್ನು ಟ್ರಾಫಿಕ್ ಪೊಲೀಸ್ ಹಿಂದಕ್ಕೆ ಕಳುಹಿಸುತ್ತಿರೋ VIDEO ವೈರಲ್
ಈ ರೀತಿಯ ಅಭ್ಯಾಸವು ಮುಂದೆ ಹೋಗದಂತೆ ನಿಮ್ಮ ಉತ್ತಮ ಬೆಳವಣಿಗೆಯನ್ನು ತಡೆಯುತ್ತದೆ. ಹೆಚ್ಚಿನವರು ಕಚೇರಿಯಲ್ಲಿ ಕೆಲಸ ಮಾಡುವಾಗ ಸೆಲ್ಫಿ ತೆಗೆದುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಸೆಲ್ಫಿ ಸಾಮಾಜಿಕವಾಗಿ ಸ್ವೀಕಾರಾರ್ಹವಾಗಿದ್ದರೂ, ಆಗಾಗ್ಗೆ ಸೆಲ್ಫಿ ತೆಗೆದುಕೊಳ್ಳುವ ಅಭ್ಯಾಸವು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
̲̲̲̲̲̲̲̲̲̲̲̲̲̲̲̲̲̲̲̲̲̲