ಬೆಂಗಳೂರು: ಉತ್ತರ ಕರ್ನಾಟಕದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ, ನೈರುತ್ಯ ರೈಲ್ವೆ ಇಲಾಖೆಯಿಂದ ಎಸ್.ಎಸ್.ಎಸ್. ಹುಬ್ಬಳ್ಳಿ –ರಾಮೇಶ್ವರಂ –ಎಸ್.ಎಸ್.ಎಸ್. ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭಿಸಲಾಗುತ್ತಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆಯು ಮಾಹಿತಿ ನೀಡಿದ್ದು, ರೈಲು ಸಂಖ್ಯೆ 07353/07354 ಎಸ್.ಎಸ್.ಎಸ್. ಹುಬ್ಬಳ್ಳಿ –ರಾಮೇಶ್ವರಂ –ಎಸ್.ಎಸ್.ಎಸ್. ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು 08 ಟ್ರಿಪ್ ಓಡಿಸಲು ನಿರ್ಧರಿಸಿದೆ ಎಂದು ಹೇಳಿದೆ.
BIG BREAKING NEWS: ವಿಧಾನಪರಿಷತ್ ಒಂದು ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ಅವಿರೋಧವಾಗಿ ಆಯ್ಕೆ
ಅದರಂತೆ ರೈಲು ಸಂಖ್ಯೆ 07353 ಎಸ್.ಎಸ್.ಎಸ್. ಹುಬ್ಬಳ್ಳಿ –ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು 06 ಆಗಸ್ಟ್ 2022ರಿಂದ 24 ಸೆಪ್ಟೆಂಬರ್ 2022 ರ ವರೆಗೆ ಎಸ್.ಎಸ್.ಎಸ್. ಹುಬ್ಬಳ್ಳಿಯಿಂದ ಪ್ರತಿ ಶನಿವಾರದಂದು ಬೆಳಿಗ್ಗೆ 06:30 ಗಂಟೆಗೆ ಹೊರಡಲಿದ್ದು ಮರುದಿನ ಬೆಳಿಗ್ಗೆ 06:15 ಗಂಟೆಗೆ ರಾಮೇಶ್ವರಂ ತಲುಪಲಿದೆ.
ರೈಲು ಸಂಖ್ಯೆ 07354 ರಾಮೇಶ್ವರಂ- ಎಸ್.ಎಸ್.ಎಸ್. ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು 07 ಆಗಸ್ಟ್ 2022 ರಿಂದ 25 ಸೆಪ್ಟೆಂಬರ್ 2022ರವರೆಗೆ ರಾಮೇಶ್ವರದಿಂದ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಹೊರಡಲಿದ್ದು ಎಸ್.ಎಸ್.ಎಸ್. ಹುಬ್ಬಳ್ಳಿ ನಿಲ್ದಾಣವನ್ನು ಮರುದಿನ ರಾತ್ರಿ 7:25 ಗಂಟೆಗೆ ತಲುಪಲಿದೆ.
ಈ ರೈಲಿಗೆ ಎಸ್.ಎಮ್.ಎಮ್. ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ ಜಂ., ಪುದುಕ್ಕೋಟ್ಟೈ, ಕಾರೈಕ್ಕುಡಿ ಜಂ., ಮಾನಾಮದುರೈ ಜಂ. ಮತ್ತು ರಾಮನಾಥಪುರಮ್ ಗಳಲ್ಲಿ ನಿಲುಗಡೆ ಇದೆ.
ಈ ರೈಲಿನ ಸಂಯೋಜನೆಯು ಒಂದು ಹವಾನಿಯಂತ್ರಿತ 2-ಟಯರ್ ಕೋಚ್, ಮೂರು ಹವಾನಿಯಂತ್ರಿತ 3-ಟಯರ್ ಕೋಚ್ ಗಳು, ಒಂಬತ್ತು ಸ್ಲೀಪರ್ ಕೋಚ್ ಗಳು, ಐದು ದ್ವಿತೀಯ ದರ್ಜೆಯ ಕೋಚ್ ಗಳು ಮತ್ತು ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಟ್ ಮೆಂಟ್ ಗಳಿಂದ ಕೂಡಿದ ಲಗೇಜ್-ಕಮ್-ಬ್ರೇಕ್ ವ್ಯಾನ್ ಗಳನ್ನು ಹೊಂದಿರಲಿದೆ.