ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕುಟುಂಬ ನಿರ್ವಹಣೆಗಾಗಿ ಏಳು ವರ್ಷದ ಬಾಲಕನೋರ್ವ ಜೊಮೆಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡತ್ತಿದ್ದಾನೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿದೆ.
ಬಾಲಕನ ತಂದೆ ಅಪಘಾತದಲ್ಲಿ ಗಾಯಗೊಂಡಿದ್ದು, ಅವರ ಕೆಲಸವನ್ನು ಈತ ನಿರ್ಹಿಸುತ್ತಿದ್ದಾನೆ. ಈತ ಬೆಳಗ್ಗೆ ಶಾಲೆಗೆ ಹೋಗುತ್ತಾನೆ. ಸಂಜೆ 6 ಗಂಟೆಯ ನಂತರ ಜೊಮೆಟೊದಲ್ಲಿ ಕೆಲಸ ಮಾಡುತ್ತಾನೆ. ಈ ಕುರಿತಂತೆ ರಾಹುಲ್ ಮಿತ್ತಲ್ ಎಂಬ ಬಳಕೆದಾರರು ತಮ್ಮ ಟ್ವಿಟರ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
This 7 year boy is doing his father job as his father met with an accident the boy go to school in the morning and after 6 he work as a delivery boy for @zomato we need to motivate the energy of this boy and help his father to get into feet #zomato pic.twitter.com/5KqBv6OVVG
— RAHUL MITTAL (@therahulmittal) August 1, 2022
ಸುಮಾರು 30 ಸೆಕೆಂಡ್ಗಳ ವಿಡಿಯೋದಲ್ಲಿ ಮಿತ್ತಲ್ ಅವರು ಹುಡುಗನೊಂದಿಗೆ ಏಕೆ ಹೀಗೆ ಮಾಡುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಒಂದು ಕೈಯಲ್ಲಿ ಚಾಕೊಲೇಟ್ ಬಾಕ್ಸ್ ಹಿಡಿದುಕೊಂಡು, ಹುಡುಗ ತನ್ನ ಕೆಲಸದ ಸಮಯದ ಬಗ್ಗೆ ವಿವರಿಸಿದ್ದಾನೆ.ಬೆಳಿಗ್ಗೆ ಶಾಲೆ ಮುಗಿಸಿದ ನಂತರ ಆಹಾರವನ್ನು ತಲುಪಿಸಲು ಸಂಜೆ 6 ರಿಂದ 11 ಗಂಟೆಯವರೆಗೆ ಮನೆ ಮನೆಗೆ ಸೈಕಲ್ನಲ್ಲಿ ಹೋಗುತ್ತೇನೆ ಎಂದು ಹುಡುಗ ಟ್ವಿಟರ್ ಬಳಕೆದಾರರಿಗೆ ತಿಳಿಸಿದ್ದಾನೆ.
ಇನ್ನು ಬಾಲಕನ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರುವ ಟ್ವಿಟರ್ ಬಳಕೆದಾರ ಮಿತ್ತಲ್ ಅವರು, ನಾವು ಈ ಹುಡುಗನ ಶಕ್ತಿಯನ್ನು ಪ್ರೇರೇಪಿಸಬೇಕಾಗಿದೆ. ಅವನ ತಂದೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಯಲು ಸಹಾಯ ಮಾಡಬೇಕಾಗಿದೆ
ಈ ವಿಡಿಯೋ 40 ಸಾವಿರಕ್ಕೂ ಹೆಚ್ಚು ವೀಕ್ಷಣೆಗೊಂಡಿದ್ದು, ಟ್ವಿಟರ್ ಬಳಕೆದಾರರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಹುಡುಗ ತೋರಿದ ದೃಢಸಂಕಲ್ಪವನ್ನು ಶ್ಲಾಘಿಸಿದ್ದಾರೆ.