ಮಂಗಳೂರು: ಮಂಗಳೂರು ನಗರದಲ್ಲಿ ಒಂದು ವಾರಗಳ ಕಾಲ ಪುರುಷರು ಬೈಕ್ ಹಿಂಬದಿಯಲ್ಲಿ ಕೂರುವಂತಿಲ್ಲ ಅಂತ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಮಂಗಳೂರಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಈ ನಿಟ್ಟಿನಲ್ಲಿ ಬೈಕ್ನಲ್ಲಿ ಕೂರುವ ಹಿಂಬದಿ ಸವಾರರು ಹೆಚ್ಚು ಕ್ರೈಮ್ನಲ್ಲಿ ಭಾಗವಹಿಸಿರುವ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದು ಒಂದು ವಾರಗಳ ಕಾಲ ಕಾಲ ಪುರುಷರು ಬೈಕ್ ಹಿಂಬದಿಯಲ್ಲಿ ಕೂರುವಂತಿಲ್ಲ ಅಂತ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಇನ್ನೂ ಈ ನಿಯಮದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಹಿರಿಯ ವಯಸ್ಸಿಗ ರನ್ನು ಆದೇಶದಲ್ಲಿ ಸ್ತ್ರೀಯರಿಗೆ ಹೊರಗಿಡಲಾಗಿದೆ.
ಇದೇ ವೇಳೇ ಅವರು ಬೆಳ್ಳಾರೆಯಲ್ಲಿ ನಡೆದ ಕೊಲೆಗೆ ಸಂಬಂಧಪಟ್ಟಂತೆ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು, ಈಗಾಗಲೇ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ ಅಂತ ಅಲೋಕ್ ಕುಮಾರ್ ಹೇಳಿದರು.