ನವದೆಹಲಿ: ಆಗಸ್ಟ್ 26 ರಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಎನ್.ವಿ ರಮಣ ( NV Ramana) ಅವರು ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ, ತಮ್ಮ ಉತ್ತರಾಧಿಕಾರಿಯನ್ನು ನಾಮನಿರ್ದೇಶನ ಮಾಡುವಂತೆ ಬುಧವಾರ ಕಾನೂನು ಮತ್ತು ನ್ಯಾಯ ಸಚಿವಾಲಯದಿಂದ ಸಂದೇಶ ಬಂದಿದ್ದು, ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಕನ್ವೆನ್ಷನ್ ಪ್ರಕಾರ, ಸಿಜೆಐ ಅತ್ಯಂತ ಹಿರಿಯ ನ್ಯಾಯಾಧೀಶರ ಹೆಸರನ್ನು ಉತ್ತರಾಧಿಕಾರಿಯಾಗಿ ಶಿಫಾರಸು ಮಾಡುತ್ತಾರೆ ಎನ್ನಲಾಗಿದೆ. ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗುವ ಈ ಸಾಲಿನಲ್ಲಿ ಜಸ್ಟಿಸ್ ಉದಯ್ ಉಮೇಶ್ ಲಲಿತ್ ಅವರು ಮುಂಚೂಣಿಯಲ್ಲಿದ್ದಾರೆ
ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ನಿಯಂತ್ರಿಸುವ ಮೆಮೊರಾಂಡಮ್ ಆಫ್ ಪ್ರೊಸೀಜರ್ (MoP) ಪ್ರಕಾರ, ನಿವೃತ್ತರಾಗಲಿರುವ CJI ಅವರು ಕಾನೂನು ಸಚಿವಾಲಯದಿಂದ ಸಂವಹನವನ್ನು ಪಡೆದ ನಂತರ ಉತ್ತರಾಧಿಕಾರಿಯನ್ನು ಹೆಸರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ.
ನ್ಯಾಯಮೂರ್ತಿ ಲಲಿತ್ ಅವರು ನೇಮಕಗೊಂಡರೆ, ಮೂರು ತಿಂಗಳಿಗಿಂತ ಕಡಿಮೆ ಅವಧಿಯನ್ನು ಹೊಂದಿರುತ್ತಾರೆ ಮತ್ತು ನವೆಂಬರ್ 8 ರಂದು ನಿವೃತ್ತರಾಗುತ್ತಾರೆ.
ಮಹಾರಾಷ್ಟ್ರದಲ್ಲಿ ಆಳದ ಕಮರಿಗೆ ಬಿದ್ದ ವ್ಯಾನ್: ನಾಲ್ವರ ದುರ್ಮರಣ, 9 ಮಂದಿಗೆ ಗಾಯ
Shocking news: ಹಣದ ವಿಚಾರಕ್ಕೆ ಜಗಳ: ಮಲಗಿದ್ದ ತಮ್ಮನನ್ನು ಗುದ್ದಲಿಯಿಂದ ಹೊಡೆದು ಕೊಂದ 16 ವರ್ಷದ ಅಣ್ಣ
BIGG BREAKING NEWS: ದೇಶದಲ್ಲಿ ಮತ್ತೆ ಏರಿಕೆ ಕಂಡ ಕೊರೊನಾ; ಕಳೆದ 24 ಗಂಟೆಗಳಲ್ಲಿ 19,893 ಹೊಸ ಪ್ರಕರಣಗಳು ಪತ್ತೆ