ರಾಯ್ಪುರ(ಛತ್ತೀಸ್ಗಢ): ಹಣದ ವಿಚಾರದಲ್ಲಿ 16 ವರ್ಷದ ಬಾಲಕನೊಬ್ಬ ತನ್ನ ಕಿರಿಯ ಸಹೋದರನನ್ನು ಕೊಂದಿರುವ ಘಟನೆ ರಾಯ್ಪುರ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ನಿಮೋರಾ ಗ್ರಾಮದಲ್ಲಿ ಮಂಗಳವಾರ ಮತ್ತು ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?
ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ತಮ್ಮ ಹಣವನ್ನು ಅಜಾಗರೂಕತೆಯಿಂದ ಖರ್ಚು ಮಾಡುತ್ತಿದ್ದ. ಅಷ್ಟೇ ಅಲ್ಲದೇ, ಅಣ್ಣನ ಬಳಿ ಆಗಾಗ್ಗೆ ಹಣಕ್ಕಾಗಿ ಪೀಡಿಸುತ್ತಿದ್ದನಂತೆ. ಈ ವಿಚಾರವಾಗಿ ಮಂಗಳವಾರ ಇಬ್ಬರು ಸಹೋದರರ ನಡುವೆ ಜಗಳವಾಗಿತ್ತು. ರಾತ್ರಿ ತಮ್ಮ ಮಲಗಿದ್ದ ಸಮಯವನ್ನು ಉಪಯೋಗಿಸಿಕೊಂಡ ಅಣ್ಣ ಗುದ್ದಲಿಯಿಂದ ಹೊಡೆದು ಕೊಂದಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್: ʻಜೂಡೋʼದಲ್ಲಿ ʻತುಲಿಕಾ ಮಾನ್ʼಗೆ ಬೆಳ್ಳಿ| Tulika Maan Wins Silver
Big news: ಕಾಮನ್ವೆಲ್ತ್ ಕ್ರೀಡಾಕೂಟಕ್ಕೆಂದು ಬಂದ ಶ್ರೀಲಂಕಾದ ಇಬ್ಬರು ಅಥ್ಲೀಟ್ಗಳು, ಒಬ್ಬ ಅಧಿಕಾರಿ ಎಸ್ಕೇಪ್!