ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ( PSI Recruitment Scam ) ಹೊರ ಬಿದ್ದ ಬಳಿಕ, ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ ಮರು ಪರೀಕ್ಷೆ ನಡೆಸೋದಾಗಿ ರಾಜ್ಯ ಸರ್ಕಾರ ( Karnataka Government ) ಘೋಷಣೆ ಮಾಡಿತ್ತು. ಇಂತಹ ಮರು ಪರೀಕ್ಷೆಯನ್ನು ಶೀಘ್ರದಲ್ಲೇ ನಡೆಸಲಾಗುತ್ತದೆ. ವಯೋಮಿತಿ ಮೀರಿ, ಪರೀಕ್ಷೆಗೆ ಅರ್ಜಿ ಸಲ್ಲಿಸೋ ಆತಂಕದಲ್ಲಿರೋರು ಭಯಬೇಡ. ಅವರಿಗೂ ಅವಕಾಶ ನೀಡಲಾಗುತ್ತದೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Jnanendra ) ತಿಳಿಸಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಭೇಟಿಯಾದಂತ ಪಿಎಸ್ಐ ಹುದ್ದೆಯ ಆಕಾಂಕ್ಷಿಗಳೊಂದಿಗೆ ಚರ್ಚಿಸಿದರು. ಈ ಬಳಿಕ ಶೀಘ್ರವೇ ಮರು ಪರೀಕ್ಷೆ ನಡೆಸಲು ಪ್ರಕಟಣೆ ಹೊರಡಿಸಲಾಗುತ್ತದೆ ಎಂದರು.
ಇನ್ನೂ ಮರು ಪರೀಕ್ಷೆ ತಡವಾಗೋ ಕಾರಣದಿಂದಾಗಿ ವಯೋಮಿತಿ ಮೀರುವ ಆತಂಕದಲ್ಲಿದ್ದವರು ಭಯಪಡಬೇಡಿ. ಪರೀಕ್ಷೆ ತಯಾರಿ ಮುಂದುವರೆಸಿ. ಮರು ಪರೀಕ್ಷೆಯ ವೇಳೆಯಲ್ಲಿ ವಯೋಮಿತಿ ಮೀರಿದಂತ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗುತ್ತದೆ ಎಂಬುದಾಗಿ ಭರವಸೆಯನ್ನು ನೀಡಿದರು.
BIGG NEWS: ಸ್ಯಾನಿಟರಿ ಪ್ಯಾಡ್ ಮೇಲೆ ಭಗವಾನ್ ಕೃಷ್ಣ ” ‘ಮಸೂಮ್ ಸಾವಾಲ್’ ಪೋಸ್ಟರ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ