ಹೈದರಾಬಾದ್: ಹೈದರಾಬಾದ್ನ ಹೊರವಲಯದಲ್ಲಿರುವ ಶಂಶಾಬಾದ್ನಲ್ಲಿ ಮುನ್ಸಿಪಲ್ ಅಧಿಕಾರಿಗಳು ಮಸೀದಿಯನ್ನು ಕೆಡವಿಸಿದ್ದು, ಇದೀಗ ಮುಸ್ಲಿಂರ ಪ್ರತಿಭಟನೆಗೆ ಕಾರಣವಾಗಿದೆ.
ಗ್ರೀನ್ ಅವೆನ್ಯೂ ಕಾಲೋನಿಯಲ್ಲಿರುವ ಮಸೀದಿ-ಎ-ಖಾಜಾ ಮಹಮೂದ್ ಅನ್ನು ನಿನ್ನೆ ಮುಂಜಾನೆ ನಗರಪಾಲಿಕೆ ಸಿಬ್ಬಂದಿ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ನೆಲಸಮಗೊಳಿಸಿದರು. ಈ ಘಟನೆಯ ವಿರುದ್ಧ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮತ್ತು ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ನಾಯಕರು ತಮ್ಮ ಪ್ರತಿಭಟನೆ ನಡೆಸಿದ್ದಾರೆ.
ಮೂರು ವರ್ಷಗಳ ಹಿಂದೆ ಮಸೀದಿಯನ್ನು ನಿರ್ಮಿಸಲಾಗಿದೆ. ಇದನ್ನು ನಿಗದಿತವಲ್ಲದ ಸ್ಥಳದಲ್ಲಿ ನಿರ್ಮಿಸಲಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪುರಸಭೆ ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಕಟ್ಟಡ ಕೆಡವಿದ್ದಾರೆ ಎಂದು ಆರೋಪಿಸಲಾಗಿದೆ.
ʻಜನರಿಂದ ಚುನಾಯಿತರಾಗಲು ಚುನಾವಣಾ ಚಿಹ್ನೆಯ ಅಗತ್ಯವಿಲ್ಲʼ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
BIGG NEWS: ಬೆಳಗಾವಿಯಲ್ಲಿ ಕಲುಷಿತ ನೀರು ಸೇವಿಸಿ ವೃದ್ಧ ಸಾವು : 40 ಜನರು ಅಸ್ವಸ್ಥ