ಬೆಂಗಳೂರು: ವಿಮಾನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ಬಿಎಂಟಿಸಿಯಿಂದ ( BMTC ) ಹೊಸದಾಗಿ ರೇಷ್ಮೆ ಸಂಸ್ಥೆಯಿಂದ ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರವನ್ನು ಆರಂಭಿಸಿದೆ. ಈ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳೋರಿಗೆ ಗುಡ್ ನ್ಯೂಸ್ ನೀಡಿದೆ.
ನೀವು ಬೆಂಗಳೂರಿನಲ್ಲಿ ಇದ್ದೀರಾ.? ಈಗ ‘Google ನಕ್ಷೆ’ಯಲ್ಲಿ ‘ವೇಗದ ಮಿತಿ’ಯ ಮಾಹಿತಿಯೂ ಲಭ್ಯ.!
ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗ ಸಂಖ್ಯೆ ಕೆಐಎ-5ಡಿ ಅನ್ನು ರೇಷ್ಮೆ ಸಂಸ್ಥೆ ಅಂದ್ರೇ ಸಿಲ್ಕ್ ಇನ್ಟಿಟ್ಯೂಟ್ ಮೆಟ್ರೋ ನಿಲ್ದಾಣದಿಂದ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಣನಕುಂಟೆ ಕ್ರಾಸ್ ಮೂಲಕ ಆರಂಭಿಸಲಾಗಿದೆ ಎಂದು ತಿಳಿಸಿದೆ.
ಬನಶಂಕರಿ ಟಿಟಿಎಂಸಿ, ಜಯನಗರ 4ನೇ ಬ್ಲಾಕ್, ಶಾಂತಿನಗರ ಟಿಟಿಎಂಸಿ, ಆರ್ ಎಂ ಗುಟ್ಟಹಳ್ಳಿ, ಹೆಬ್ಬಾಳ ಮಾರ್ಗವಾಗಿ 4 ಹವಾನಿಯಂತ್ರಿತ ವಾಯುವಜ್ರ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಿದೆ.
BIG NEWS: ಭಾರತ ‘ಆರ್ಥಿಕ ಹಿಂಜರಿತ’ಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಹೀಗಿದೆ.. ಬಿಎಂಟಿಸಿ ಹೊಸ ಮಾರ್ಗದ ಸಂಖ್ಯೆಯ ಬಸ್ ಸಂಚಾರ ವೇಳಾಪಟ್ಟಿ