ನವದೆಹಲಿ : ಆಮ್ ಆದ್ಮಿ ಪಕ್ಷದ ಹಳೆಯ ಮದ್ಯ ನೀತಿಯು ಆಗಸ್ಟ್ 1 ರಿಂದ ಮತ್ತೆ ಜಾರಿಗೆ ಬರಲಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದಿಂದ (ಇಒಡಬ್ಲ್ಯು) ನಡೆಯುತ್ತಿರುವ ತನಿಖೆ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ದೆಹಲಿ ಸರ್ಕಾರದ ನಡುವಿನ ಮುಖಾಮುಖಿಯ ನಡುವೆ ರಾಷ್ಟ್ರ ರಾಜಧಾನಿಯಲ್ಲಿನ ಮದ್ಯ ನೀತಿಯ ಸುದ್ದಿ ಹೊಸ ತಿರುವು ಪಡೆದುಕೊಂಡಿದೆ. ದೆಹಲಿ ಸರ್ಕಾರವು ಮುಂದಿನ ಆರು ತಿಂಗಳ ಕಾಲ ಚಿಲ್ಲರೆ ಮದ್ಯ ಮಾರಾಟದ ಹಳೆಯ ನೀತಿ ಮುಂದುವರಿಸಲು ನಿರ್ಧರಿಸಿದೆ.
ಇದೇ ವೇಳೆ ಸರ್ಕಾರದ ನೂತನ ಮದ್ಯ ನೀತಿಯನ್ನು ಸಮರ್ಥಿಸಿಕೊಂಡಿರುವ ಸಿಸೋಡಿಯಾ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ನೀತಿ ಜಾರಿಯಾಗಿದೆ ಎಂದು ಹೇಳಿದ್ದಾರೆ.
ಅಬಕಾರಿ ಖಾತೆಯನ್ನು ಹೊಂದಿರುವ ಸಿಸೋಡಿಯಾ, ಹೊಸ ನೀತಿಯನ್ನು ಜಾರಿಗೆ ತರುವವರೆಗೆ ಆರು ತಿಂಗಳ ಅವಧಿಗೆ ಅಬಕಾರಿ ನೀತಿಯ ಹಳೆಯ ನೀತಿಯೇ ಮುಂದುವರೆಸುವಂತೆ ಗುರುವಾರ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗುತ್ತಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಸೋಡಿಯಾ, ದೆಹಲಿಯಲ್ಲಿ ಕಾನೂನುಬದ್ಧ ಮದ್ಯ ಮಾರಾಟವನ್ನು ಮುಚ್ಚಿದರೆ ರಾಷ್ಟ್ರ ರಾಜಧಾನಿ ಗುಜರಾತಿನಲ್ಲಿ ನಡೆದ ದುರಂತಕ್ಕೆ ಸಾಕ್ಷಿಯಾಗಬಹುದು ಎಂದು ಹೇಳಿದರು.
ನಾವು ದೆಹಲಿಯಲ್ಲಿ ಹೂಚ್ ದುರಂತವನ್ನು ಬಯಸುವುದಿಲ್ಲ. ಅದಕ್ಕಾಗಿಯೇ ಹೊಸ ಮದ್ಯ ನೀತಿಯ ಬದಲಿಗೆ ಹಳೆಯ ಮದ್ಯದ ನೀತಿಯ ಮೂಲಕ ಮದ್ಯವನ್ನು ಮಾರಾಟ ಮಾಡಲಾಗುವುದು ಎಂದು ಸಿಸೋಡಿಯಾ ಹೇಳಿದ್ದಾರೆ.
ಅಬಕಾರಿ ನೀತಿ 2021-22, ಮಾರ್ಚ್ 31 ರ ನಂತರ ತಲಾ ಎರಡು ತಿಂಗಳವರೆಗೆ ಎರಡು ಬಾರಿ ವಿಸ್ತರಿಸಲಾಗಿದ್ದು, ಜುಲೈ 31 ರಂದು ಮುಕ್ತಾಯಗೊಳ್ಳುತ್ತದೆ. ಆದರೆ, ಕರಡು ನೀತಿಯನ್ನು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಅನುಮೋದನೆಗಾಗಿ ಕಳುಹಿಸಬೇಕಿದೆ.
ಕಳೆದ ವಾರ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ದೆಹಲಿಯ ಅಬಕಾರಿ ನೀತಿ 2021-22 ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಇದರಿಂದ ಕೇಂದ್ರ ಮತ್ತು ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) ನಡುವಿನ ಸಂಬಂಧವು ಬಿರುಕು ಕಂಡಿತ್ತು. ಅಬಕಾರಿ ಇಲಾಖೆಯ ಜವಾಬ್ದಾರಿಯನ್ನು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಉಸ್ತುವಾರಿ ವಹಿಸಿದ್ದರು.